ನರೇಂದ್ರ ಮೋದಿ ಪುನಃ ಪ್ರಧಾನ ಮಂತ್ರಿಯಾದಾಗ ಭಾರತ ಹಿಂದೂರಾಷ್ಟ್ರವಾಗದಂತೆ ತಡೆಯಲು ಯಾರಿಗೂ ಸಾಧ್ಯವಿಲ್ಲ: ಪ್ರಮೋದ್ ಮುತಾಲಿಕ್

|

Updated on: Jan 04, 2024 | 4:53 PM

ರಾಜಕೀಯದಲ್ಲಿ ಅಪ್ಪನ ಪಂಚೆ ಹಿಡಿದು ಬೆಳೆದಿರುವ ಅವರಿಗೆ ಹಿಂದೂತ್ವದ ಬಗ್ಗೆ ಏನೂ ಗೊತ್ತಿಲ್ಲ. ಪಾಕಿಸ್ತಾನ ಮತ್ತು ಅಪಘಾನಿಸ್ತಾನದಲ್ಲಿ ಆರ್ಥಿಕತೆ ದಿವಾಳಿತಯೆದ್ದಿದೆ ಮತ್ತು ಅರಾಜಕತೆ ತಾಂಡವಾಡುತ್ತಿದೆ ಅನ್ನೋದನ್ನು ಒಪ್ಪಿಕೊಳ್ಳುವ ಯತೀಂದ್ರ ಭಾರತ ಹಿಂದೂ ರಾಷ್ಟ್ರವಾಗದಿದ್ದರೆ ಅಂಥ ಸ್ಥಿತಿ ಇಲ್ಲೂ ಉಂಟಾಗಬಹುದು ಅಂತ ಅರ್ಥಮಾಡಿಕೊಳ್ಳಲಾರರೇ ಎಂದು ಮುತಾಲಿಕ್ ಹೇಳಿದರು.

ಹುಬ್ಬಳ್ಳಿ: ಬಿಜೆಪಿ ಮತ್ತು ಆರೆಸ್ಸೆಸ್ ಭಾರತವನ್ನು ಹಿಂದೂ ರಾಷ್ಟ್ರ ಮಾಡಹೊರಟಿವೆ ಎಂದು ಯತೀಂದ್ರ ಸಿದ್ದರಾಮಯ್ಯ (Yatindra Siddaramaiah) ನೀಡಿರುವ ಹೇಳಿಕೆಯನ್ನು ಶ್ರೀರಾಮಸೇನೆ (Sriram Sene) ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಉಗ್ರವಾಗಿ ಖಂಡಿಸಿದರು. ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಯತೀಂದ್ರ ಯಾರಿಗೂ ಗೊತ್ತಿರಲಿಲ್ಲ. ರಾಜಕೀಯದಲ್ಲಿ ಅಪ್ಪನ ಪಂಚೆ ಹಿಡಿದು ಬೆಳೆದಿರುವ ಅವರಿಗೆ ಹಿಂದೂತ್ವದ ಬಗ್ಗೆ ಏನೂ ಗೊತ್ತಿಲ್ಲ. ಪಾಕಿಸ್ತಾನ ಮತ್ತು ಅಪಘಾನಿಸ್ತಾನದಲ್ಲಿ ಆರ್ಥಿಕತೆ ದಿವಾಳಿತಯೆದ್ದಿದೆ ಮತ್ತು ಅರಾಜಕತೆ ತಾಂಡವಾಡುತ್ತಿದೆ ಅನ್ನೋದನ್ನು ಒಪ್ಪಿಕೊಳ್ಳುವ ಯತೀಂದ್ರ ಭಾರತ ಹಿಂದೂ ರಾಷ್ಟ್ರವಾಗದಿದ್ದರೆ ಅಂಥ ಸ್ಥಿತಿ ಇಲ್ಲೂ ಉಂಟಾಗಬಹುದು ಅಂತ ಅರ್ಥಮಾಡಿಕೊಳ್ಳಲಾರರೇ ಎಂದು ಮುತಾಲಿಕ್ ಹೇಳಿದರು. ಭಾರತವನ್ನು ಹಿಂದೂರಾಷ್ಟ್ರ ಮಾಡೋದು ನಿಶ್ಚಿತ ತಾಕತ್ತಿದ್ದರೆ ಯತೀಂದ್ರ ತಮ್ಮನ್ನು ತಡೆಯಲಿ ಎಂದು ಅವರು ಸವಾಲೆಸೆದರು. 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಲಿದ್ದಾರೆ ಮತ್ತು ಆಗ ಭಾರತವನ್ನು ಹಿಂದೂ ರಾಷ್ಟ್ರ ಆಗದಂತೆ ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ಮುತಾಲಿಕ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on