[lazy-load-videos-and-sticky-control id=”A9sI4isoMCc”]
ಬೆಳಗಾವಿ: ಕೋವಿಡ್ ನಿರ್ವಹಣೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಎಡವಟ್ಟಿನ ಮೇಲೆ ಎಡವಟ್ಟು ಮಾಡುತ್ತಲೇ ಇದೆ. ಬೆಳಗಾವಿಯ ಸ್ಮಶಾನದಲ್ಲಿ ಚಿತೆ ಮೇಲೆ ಶವ ಎಸೆದ ಪ್ರಕರಣದ ನಂತರ ಈಗ ಮತ್ತೊಂದು ಎಡವಟ್ಟು ಕಂಡು ಬಂದಿದೆ. ಮೃತದೇಹದ ಸುತ್ತ ಪಿಪಿಇ ಕಿಟ್ ಇಲ್ಲದೆ ಸಿಬ್ಬಂದಿ ಓಡಾಡಿರುವಂತ ಘಟನೆ ಬೆಳಗಾವಿಯ ಸದಾಶಿವನಗರದ ಸ್ಮಶಾನದಲ್ಲಿ ನಡೆದಿದೆ.
ಸೋಂಕಿತರ ಮೃತದೇಹ ಬಳಿ ಇಬ್ಬರು ಸಿಬ್ಬಂದಿ ಬಿಂದಾಸಾಗಿ ಓಡಾಡುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಬೆಳಗಾವಿಯಲ್ಲಿ ಕೊರೊನಾದಿಂದ ಮೃತಪಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ನಿನ್ನೆ ಒಂದೇ ದಿನ 8 ಸೋಂಕಿತರ ಅಂತ್ಯಸಂಸ್ಕಾರ ಮಾಡಲಾಗಿದೆ ಎಂಬ ಮಾಹಿತಿ ಇದೆ. ಸೋಂಕಿತರ ಮೃತದೇಹದ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಕೆಲ ಸಿಬ್ಬಂದಿ ಪಿಪಿಇ ಕಿಟ್ ಧರಿಸದೇ ನಿರ್ಲಕ್ಷ್ಯವಹಿಸಿದ್ದಾರೆ. ಮೃತದೇಹಗಳ ಸುತ್ತ ಬಿಂದಾಸ್ ಆಗಿ ಓಡಾಡಿದ್ದಾರೆ.
ಸಿಬ್ಬಂದಿಯನ್ನು ಅಪಾಯದ ಕೂಪಕ್ಕೆ ತಳ್ಳುತ್ತಿದೆಯಾ ಜಿಲ್ಲಾಡಳಿತ?
ಅಗತ್ಯ ಪಿಪಿಇ ಕಿಟ್‌ಗಳನ್ನು ಪೂರೈಕೆ ಮಾಡ್ತಿಲ್ವಾ ಬೆಳಗಾವಿ ಜಿಲ್ಲಾಡಳಿತ? ಸಿಬ್ಬಂದಿಯನ್ನು ಅಪಾಯದ ಕೂಪಕ್ಕೆ ತಳ್ಳುತ್ತಿದೆಯಾ? ಎಂಬ ಪ್ರಶ್ನೆಗಳು ಎದ್ದಿವೆ. ಇದರಿಂದ ಸೋಂಕಿತರ ಅಂತ್ಯಕ್ರಿಯೆ ವೇಳೆ ಕೊರೊನಾ ಸೋಂಕು ಹರಡುವ ಭೀತಿ ನಡುವೆಯೇ ಅಂತ್ಯಕ್ರಿಯೆಯಲ್ಲಿ ಸಂಬಂಧಿಕರು ಭಾಗಿಯಾಗುತ್ತಿದ್ದಾರೆ. ಜಿಲ್ಲಾಡಳಿತ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಪಿಇ ಕಿಟ್ ಇಲ್ಲದೇ ಇಬ್ಬರು ಸಿಬ್ಬಂದಿ ಓಡಾಟದ ದೃಶ್ಯ ವೈರಲ್ ಆಗಿದೆ.
Published On - 10:17 am, Mon, 27 July 20