[lazy-load-videos-and-sticky-control id=”zvqFXRmav6I”]
ಬಳ್ಳಾರಿ: ಅರಣ್ಯ ಸಚಿವ ಆನಂದ್ ಸಿಂಗ್ಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಆನಂದ್ ಸಿಂಗ್ 24ರಂದು ಕೊವಿಡ್ ಟೆಸ್ಟ್ ಮಾಡಿಸಿದ್ದರು. ನಿನ್ನೆ ರಾತ್ರಿ ಸಚಿವರ ರಿಪೂರ್ಟ್ ಬಂದಿದ್ದು, ಅವರಿಗೆ ಸೋಂಕು ಇರುವುದು ದೃಢವಾಗಿದೆ. ಸದ್ಯ ಈಗ ಸಚಿವರು ಹೋಮ್ ಐಸೋಲೇಷನ್ ಆಗಿದ್ದಾರೆ.
ಆನಂದ್ ಸಿಂಗ್ ಅವರಿಗೆ ಯಾವುದೇ ಲಕ್ಷಣ ಇಲ್ಲದಿದ್ರೂ ಕೊರೊನಾ ಪಾಸಿಟಿವ್ ಬಂದಿದೆ. ಬಳ್ಳಾರಿ ಜಿಲ್ಲೆ ಹೊಸಪೇಟೆ ನಿವಾಸದಲ್ಲಿ ಸಚಿವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆನಂದ್ ಸಿಂಗ್ ಅವರು ಇತ್ತೀಚೆಗೆ ಕೊರೊನಾ ವಾರ್ಡ್ಗೆ ಭೇಟಿ ನೀಡಿದ್ದರು. ಅಲ್ಲದೆ ಕೆಲ ದಿನಗಳ ಹಿಂದೆ ಆನಂದ್ ಸಿಂಗ್ ಕಾರು ಚಾಲಕನಿಗೂ ಕೊರೊನಾ ದೃಢವಾಗಿತ್ತು.