ಯತ್ನಾಳ್ ವಿಷಯದಲ್ಲಿ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಣಯ ನಾವ್ಯಾರೂ ಪ್ರಶ್ನಿಸುವಂತಿಲ್ಲ: ಡಾ ಕೆ ಸುಧಾಕರ್

ಅರುಣ್​ ಕುಮಾರ್​ ಬೆಳ್ಳಿ

Updated on: Apr 05, 2025 | 6:19 PM

ಬಸನಗೌಡ ಯತ್ನಾಳ್ ಯಾವತ್ತೂ ಪಕ್ಷದ ವಿರುದ್ಧ ಮಾತಾಡಿದವರಲ್ಲ, ಪಕ್ಷಕ್ಕೆ ಮಾರಕವೆನಿಸುವ ರೀತಿಯಲ್ಲಿ ಮಾತಾಡಿಲ್ಲ, ಅವರಿಗೆ ಕೆಲ ನಾಯಕರ ಬಗ್ಗೆ ಅಸಮಾಧಾನವಿತ್ತು ಮತ್ತು ಅವರ ವಿರುದ್ಧ ಸಾರ್ವಜನಿಕವಾಗಿ ನಾಲಗೆ ಹರಿಬಿಡುತ್ತಿದ್ದರು, ತಮ್ಮ ಅಸಮಧಾನವನ್ನು ಪಕ್ಷದ ವೇದಿಕೆಯೊಳಗೆ ತೋಡಿಕೊಂಡಿದ್ದರೆ ಆಗುತಿತ್ತು, ಅವರು ಹಾಗೆ ಮಾಡಲಿಲ್ಲ ಎಂದು ಸುಧಾಕರ್ ಹೇಳಿದರು

ಚಿಕ್ಕಬಳ್ಳಾಪುರ, ಏಪ್ರಿಲ್ 5:  ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಪಕ್ಷದಿಂದ ಉಚ್ಚಾಟನೆಯಾಗಿದ್ದು ದುರದೃಷ್ಟಕರ, ನ್ಯಾವ್ಯಾರೂ ಹೈಕಮಾಂಡ್ ನಿರ್ಣಯವನ್ನು ಪ್ರಶ್ನಿಸಬಾರದು ಎಂದು ಚಿಕ್ಕಬಳ್ಳಾಪುರದ ಸಂಸದ ಡಾ ಕೆ ಸುಧಾಕರ್ ಹೇಳಿದರು. ಯತ್ನಾಳ್ ಒಬ್ಬ ಜನಾನುರಾಗಿ ನಾಯಕ ಮತ್ತು ಜನಪ್ರಿಯರೂ ಹೌದು, ಅವರ ಬಗ್ಗೆ ಖಂಡಿತ ಸಹಾನುಭೂತಿ ಇದೆ, ಅವರು ತನಗೆ ಹಿರಿಯ ಸ್ನೇಹಿತ; ಜಾಸ್ತಿ ಟೀಕೆ ಮಾಡೋದು ಬೇಡ, ಭಾಷೆ ಇತಿಮಿತಿಯಲ್ಲಿ ಇರಬೇಕು ಅಂತ ಕಿವಿಮಾತು ಹೇಳಿದ್ದೆ, ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸು ಬರುತ್ತಾರೆಂಬ ವಿಶ್ವಾಸ ತನಗಿದೆ ಎಂದು ಸಂಸದ ಹೇಳಿದರು.

ಇದನ್ನೂ ಓದಿ:  ಒಂದೇ ವೇದಿಕೆಯಲ್ಲಿದ್ದರೂ ಪರಸ್ಪರ ಮುಖ ನೋಡದ ಡಾ ಕೆ ಸುಧಾಕರ್ ಮತ್ತು ಪ್ರದೀಪ್ ಈಶ್ವರ್!

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.