ತನ್ನಿಂದ ಭ್ರಷ್ಟಾಚಾರ ನಡೆದಿಲ್ಲವೆಂದು ಬೆಳ್ತಂಗಡಿ ಮಾರಿಗುಡಿಯಲ್ಲಿ ಪ್ರಮಾಣ ಮಾಡಿದ ಶಾಸಕ ಹರೀಶ್ ಪೂಂಜಾ

|

Updated on: Aug 14, 2024 | 2:23 PM

ಮಾರಿಗುಡಿಯಲ್ಲಿ ಆಣೆ-ಪ್ರಮಾಣ ಮಾಡಿದ ಬಳಿಕ ಹರೀಶ್ ಪೂಂಜಾ 11 ತೆಂಗಿನಕಾಯಿಗಳನ್ನು ಒಡೆದರು. ಈಗ ಪ್ರಶ್ನೆಯಲ್ಲಿರುವ ಪ್ರವಾಸಿ ಮಂದಿರದ ಉದ್ಘಾಟನೆ ನಡೆದು ಸುಮಾರು ಒಂದೂವರೆ ವರ್ಷ ಆಗಿದೆ. ಆದರೆ ರಕ್ಷಿತ್ ಶಿವರಾಂ ಈಗ ಪೂಂಜಾ ವಿರುದ್ಧ ಕಮೀಶನ್ ಪಡೆದಿರುವ ಆರೋಪಗಳನ್ನು ಮಾಡುತ್ತಿದ್ದಾರೆ.

ಮಂಗಳೂರು: ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಅವರು ಭ್ರಷ್ಟಾಚಾರವೆಸಗಿಲ್ಲ ಎಂದು ದೇವಸ್ಥಾನವೊಂದರಲ್ಲಿ ಪ್ರಮಾಣ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಶಾಸಕನ ವಿರುದ್ಧ ಪ್ರವಾಸಿ ಮಂದಿರ ನಿರ್ಮಾಣ ಮತ್ತು ಹೆದ್ದಾರಿ ಕಾಮಗಾರಿಯಲ್ಲಿ ಕಮೀಶನ್ ಪಡೆದಿರುವರೆಂದು ಗುರುತರವಾದ ಆರೋಪ ಮಾಡಿದ್ದರಲ್ಲದೆ ಅವರ ಭ್ರಷ್ಟಾಚಾರವೆಸಗಿರುವುದನ್ನು ತನಿಖೆ ಮಾಡಲು ಎಸ್​ಐಟಿಯೊಂದನ್ನು ರಚಿಸಬೇಕೆಂದು ಹೇಳಿದ್ದರು. ಅವರ ಎಲ್ಲ ಆರೋಪಗಳನ್ನು ಅಲ್ಲಗಳೆದ ಹರೀಶ್ ಇಂದು ತಮ್ಮ ಕೆಲ ಬೆಂಬಲಿಗರೊಂದಿಗೆ ಬೆಳ್ತಂಗಡಿಯಲ್ಲಿರುವ ಮಾರಿಗುಡಿಗೆ ಹೂವು-ಹಣ್ಣು ಮತ್ತು ತೆಂಗಿನಕಾಯಿಯೊಂದಿಗೆ ತೆರಳಿ ತಾನು ಒಂದೇ ಒಂದು ರೂಪಾಯಿಯನ್ನು ಕಮೀಶನ್ ರೂಪದಲ್ಲಿ ಪಡೆದಿಲ್ಲ, ಹೆದ್ದಾರಿ ನಿರ್ಮಾಣ ಮತ್ತು ಪ್ರವಾಸಿ ಮಂದಿರ ನಿರ್ಮಾಣ ಯೋಜನೆಗಳಲ್ಲಿ ತಾನು ಲಂಚ ಪದಿರುವೆನೆಂದು ರಕ್ಷಿತ್ ಶಿವರಾಂ ಮಾಡಿರುವ ಆರೋಪ ಸುಳ್ಳು, ಮತ್ತು ವಿಮಲ್ ಕನ್​ಸ್ಟ್ರಕ್ಷನ್ ಕಂಪನಿಯಲ್ಲೂ ತನ್ನ ಪಾಲುದಾರಿಕೆ ಇಲ್ಲವೆಂದು ತಾಯಿಯ ಮುಂದೆ ಪ್ರಮಾಣ ಮಾಡುತ್ತಿದ್ದೇನೆ ಎಂದರು. ಒಂದು ವೇಳೆ ತಾನು ಕಮೀಶನ್ ಪಡೆದಿದ್ದರೆ ತಾಯಿ ತನಗೆ ಶಿಕ್ಷೆ ನೀಡಲಿ, ಇಲ್ಲದಿದ್ದರೆ ಸುಳ್ಳು ಆರೋಪ ಮಾಡುತ್ತಿರುವ ರಕ್ಷಿತ್ ಅವರಿಗೆ ಶಿಕ್ಷೆ ನೀಡಲಿ ಎಂದು ಪೂಂಜಾ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಿಎಂ ಆದ ಬೆನ್ನಲ್ಲೇ ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ: ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು