Pigeon Tournament: ಜಗಳ-ತಂಟೆ ಬೇಡ ಕಣ್ರಯ್ಯ, ಪರಸ್ಪರ ಮಾತುಕತೆ ಮೂಲಕ ಜಗಳ ಬಗೆಹರಿಸಿಕೊಳ್ಳಿ ಅಂತ ಸಲಹೆ ನೀಡಿದ್ದು ಕುಖ್ಯಾತ ರೌಡಿ ಸೈಲೆಂಟ್ ಸುನೀಲ!

ಅರುಣ್​ ಕುಮಾರ್​ ಬೆಳ್ಳಿ

Updated on: Jan 25, 2023 | 1:19 PM

ಸ್ವರ್ಗಸ್ಥ ಡಾನ್ ಗಳಾದ ಕೊತ್ವಾಲ ರಾಮಚಂದ್ರ ಮತ್ತು ಜಯರಾಜ್ ಮೊದಲಾದವರ ಜಮಾನಾದಲ್ಲೂ ಅವುಗಳನ್ನು ಆಯೋಸಿಲಾಗುತಿತ್ತು ಮತ್ತು ಆ ಮಹಾನುಭಾವರು ಕೂಡ ಭಾಗವಹಿಸುತ್ತಿದ್ದರಂತೆ.

ಬೆಂಗಳೂರು:  ‘ದೆವ್ವದ ಬಾಯಲ್ಲಿ ಭಗವದ್ಗೀತೆ’ ಅಂತ ಕನ್ನಡದಲ್ಲಿ ಮಾತಿದೆ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ ಬೆಂಗಳೂರು ನಗರದಲ್ಲಿ ಆಯೋಜಿಸಲಾಗಿದ್ದ ಪಾರಿವಾಳ ಟೂರ್ನಮೆಂಟ್ (pigeon Tournament) ಒಂದರಲ್ಲಿ ಪ್ರಾಯಶಃ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಖ್ಯಾತ ರೌಡಿ ಸೈಲೆಂಟ ಸುನೀಲ (Silent Sunil) ಅಲ್ಲಿದ್ದ ಜನರಿಗೆ ಯಾವುದೆ ಜಗಳ-ತಂಟೆ ಅಂತ ಮಾಡಿಕೊಳ್ಳಬೇಡಿ, ಯಾವುದೇ ತಕರಾರಿದ್ದರೂ ಮುಖಾಮುಖಿಯಾಗಿ ಕೂತು ಮಾತುಕತೆಯ (dialogue) ಮೂಲಕ ಪರಿಹರಿಸಿಕೊಳ್ಳಬಹುದು ಅಂತ ಹೇಳುತ್ತಿದ್ದಾನೆ! ಬೆಂಗಳೂರು ಮಹಾನಗರದಲ್ಲಿ ಅಂದಕಾಲತ್ತಿಲ್ ಪಾರಿವಾಳ ಟೂರ್ನಮೆಂಟ್ ಗಳನ್ನು ಆಯೋಜಿಸಲಾಗುತ್ತದೆ. ಸ್ವರ್ಗಸ್ಥ ಡಾನ್ ಗಳಾದ ಕೊತ್ವಾಲ ರಾಮಚಂದ್ರ ಮತ್ತು ಜಯರಾಜ್ ಮೊದಲಾದವರ ಜಮಾನಾದಲ್ಲೂ ಅವುಗಳನ್ನು ಆಯೋಸಿಲಾಗುತಿತ್ತು ಮತ್ತು ಆ ಮಹಾನುಭಾವರು ಕೂಡ ಭಾಗವಹಿಸುತ್ತಿದ್ದರಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.