Pratap Simha; ಸಿದ್ದರಾಮಯ್ಯ ಸಾಹೇಬರೇ ಮತ್ತು ಶಿವಕುಮಾರಣ್ಣ, ಸರ್ಕಾರ ನಿಮ್ಮದು ಎಲ್ಲ ಹಗರಣಗಳ ತನಿಖೆ ಮಾಡಿಸಿ: ಪ್ರತಾಪ್ ಸಿಂಹ, ಸಂಸದ

ಅರುಣ್​ ಕುಮಾರ್​ ಬೆಳ್ಳಿ

Updated on: Jun 02, 2023 | 3:20 PM

ಆ ಹಗರಣಗಳಲ್ಲಿ ಬಿಜೆಪಿ ಸೇರಿದವರೇನಾದರೂ ಇದ್ದರೆ ಪಕ್ಷವನ್ನು ಸ್ವಚ್ಛಗೊಳಿಸಿದಂತಾಗುತ್ತದೆ ಎಂದು ಪ್ರತಾಪ್ ಸಿಂಹ ಹೇಳಿದರು.

ಮೈಸೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ವಿರೋಧ ಪಕ್ಷ ಕಾಂಗ್ರೆಸ್ ಪಕ್ಷ ಮಾಡಿದ ಎಲ್ಲ ಆರೋಪಿಸಿದ ಎಲ್ ಹಗರಣಗಳ ತನಿಖೆಯಾಗಬೇಕೆಂದು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಂಸದ, ಕಾಂಗ್ರೆಸ್ ಅರೋಪ ಮಾಡಿದ 40 ಪರ್ಸೆಂಟ್ ಕಮೀಶನ್, ಪಿಎಸ್ ಐ ನೇಮಕಾತಿ ಹಗರಣ (PSI recruitment scam), ಕೋವಿಡ್ ಪಿಡುಗು ಸಂದರ್ಭದಲ್ಲಿನ ಹಗರಣ, ಮೊದಲಾದ ಎಲ್ಲ ಹಗರಣಗಳ ತನಿಖೆಗೆ ಕಾಂಗ್ರೆಸ್ ಸರ್ಕಾರ ಆದೇಶಿಸಿದರೆ, ಸತ್ತಯ ಬಯಲಿಗೆ ಬರುತ್ತದೆ ಮತ್ತು ಕಾಂಗ್ರೆಸ್ ನಾಯಕರು ಸತ್ಯಸಂಧರು ಅನ್ನೋದು ಜನಕ್ಕೆ ಗೊತ್ತಾಗುತ್ತದೆ ಎಂದು ಸಂಸದ ವ್ಯಂಗ್ಯವಾಡಿದರು. ಸರ್ಕಾರವೇ ಈಗ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಕೈಯಲ್ಲಿರುವುದರಿಂದ ಅವರು ಎಲ್ಲ ಹಗರಣಗಳ ತನಿಖೆ ಮಾಡಿಸಿದಾಗ, ಆ ಹಗರಣಗಳಲ್ಲಿ ಬಿಜೆಪಿ ಸೇರಿದವರೇನಾದರೂ ಇದ್ದರೆ ಪಕ್ಷವನ್ನು ಸ್ವಚ್ಛಗೊಳಿಸಿದಂತಾಗುತ್ತದೆ ಎಂದು ಪ್ರತಾಪ್ ಸಿಂಹ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.