HDK in Bengaluru; ಜೆಡಿಎಸ್ ಪಕ್ಷವನ್ನು ನಾಶ ಮಾಡುವುದು ಸಾಧ್ಯವಿಲ್ಲ, ನನಗೆ ಸಂಖ್ಯೆ ಮುಖ್ಯವಲ್ಲ, ಹೋರಾಟ ಯಾವತ್ತೂ ನಿಲ್ಲಿಸಲ್ಲ: ಹೆಚ್ ಡಿ ಕುಮಾರಸ್ವಾಮಿ

|

Updated on: Jun 22, 2023 | 6:59 PM

ಆಹಾರ ಭದ್ರತೆ ಕಾಯ್ದೆಯನ್ನು ಜಾರಿಗೆ ತಂದಿದ್ದು 1995 ರಲ್ಲಿ ರಾಷ್ಟ್ರದ ಪ್ರಧಾನ ಮಂತ್ರಿಗಳಾಗಿದ್ದ ಹೆಚ್ ಡಿ ದೇವೇಗೌಡ ಎಂದು ಕುಮಾರಸ್ವಾಮಿ ಹೇಳಿದರು.

ಬೆಂಗಳೂರು: ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಬೆಂಗಳೂರಲ್ಲಿ ಇಂದು ಸುದೀರ್ಘವಾದ ಪತ್ರಿಕಾ ಗೋಷ್ಟಿ ನಡೆಸಿ ಹಲವಾರು ಸಂಗತಿಗಳನ್ನು ಮಾತಾಡಿದರು. ಜೆಡಿಎಸ್ ಪಕ್ಷವನ್ನು (JDS party) ಸರ್ವನಾಶ ಮಾಡಲು ಕಾಂಗ್ರೆಸ್ ಪಕ್ಷ ಅಪರೇಷನ್ ಹಸ್ತ ನಡೆಸುತ್ತಿರುವ ಬಗ್ಗೆ ಮಾಧ್ಯಮವೊಂದರಲ್ಲಿ ಚರ್ಚೆಯಾಗಿರುವುದನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, ತಮ್ಮ ಪಕ್ಷ ನಾಶವಾಗುವಂಥ ಪಕ್ಷ ಅಲ್ಲ, ತನಗೆ ಯಾವತ್ತೂ ಸಂಖ್ಯೆ ಮುಖ್ಯವಲ್ಲ, ತನ್ನೊಂದಿಗೆ 10 ಶಾಸಕರಿರಲಿ ಇಲ್ಲವೇ 20; ಹೋರಾಟ ಮಾಡುತ್ತಲೇ ಇರುವುದಾಗಿ ಹೇಳಿದರು. ಆಹಾರ ಭದ್ರತೆ ಕಾಯ್ದೆಯನ್ನು ಜಾರಿಗೆ ತಂದಿದ್ದು 1995 ರಲ್ಲಿ ರಾಷ್ಟ್ರದ ಪ್ರಧಾನ ಮಂತ್ರಿಗಳಾಗಿದ್ದ ಹೆಚ್ ಡಿ ದೇವೇಗೌಡ (HD Devegowda). ಆಗ ಭಾರತದ ಜನಸಂಖ್ಯೆ 93 ಕೋಟಿಯಾಗಿತ್ತು, ಸುಮಾರು 36 ಕೋಟಿಗಳಷ್ಟಿದ್ದ ಬಡಜನರಿಗೆ ಅಕ್ಕಿ ಕೇವಲ ರೂ. 3 ಗಳಿಗೆ ಒಂದು ಕೇಜಿ ಸಿಗುವಂತೆ ಮಾಡಿದ ಶ್ರೇಯಸ್ಸು ದೇವೇಗೌಡರಿಗೆ ಸಲ್ಲುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ