Tumakuru: ಗೋಮಾಂಸ ಭಕ್ಷಿಸುವುದು ತಪ್ಪಾದರೆ ಸಸ್ಯಾಹಾರ ಸೇವಿಸುವುದು ಕೂಡ ತಪ್ಪು, ಸಸಿಗಳೂ ಉಸಿರಾಡುತ್ತವೆ: ಡಾ ಜಿ ಪರಮೇಶ್ವರ್
ಒಬ್ಬ ಹಿಂದೂ ಆಗಿ ತಾವೂ ಕೂಡ ಗೋವಿನ ಪೂಜೆ ಮಾಡಿರುವುದಾಗಿ ಹೇಳಿದ ಪರಮೇಶ್ವರ್ ಎಕನಾಮಿಕ್ಸ್ ಮತ್ತು ನಂಬಿಕೆ ಎರಡು ಭಿನ್ನ ವಿಷಯಗಳು ಎಂದರು.
ತುಮಕೂರು: ನಗರದಲ್ಲಿಂದು ಸುದ್ದಿಗೋಷ್ಟಿಯೊಂದನ್ನು ಆಯೋಜಿಸಿ ಮಾತಾಡಿದ ಗೃಹ ಸಚಿವ ಡಾ ಜಿ ಪರಮೇಶ್ವರ್ (G Parameshwar) ಪ್ರತಿಯೊಬ್ಬ ಭಾರತೀಯನಿಗೆ ತನ್ನ ಧರ್ಮ ಆಚರಿಸುವ, ತನ್ನ ನಂಬಿಕೆಯನ್ನು ಅನುಸರಿಸುವ ಮುಕ್ತ ಅವಕಾಶವನ್ನು ಭಾರತದ ಸಂವಿಧಾನ (the Constitution) ಕಲ್ಪಿಸಿದೆ. ಕಾಂಗ್ರೆಸ್ ಪಕ್ಷದ ವಿರೋಧ ಹೊರತಾಗಿಯೂ ಬಿಜೆಪಿ ಸರ್ಕಾರ (BJP government) ಸಂವಿಧಾನಕ್ಕೆ ವಿರುದ್ಧವಾಗಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತು. ಅದನ್ನೀಗ ತಮ್ಮ ಸರ್ಕಾರ ರದ್ದುಪಡಿಸುತ್ತಿದೆ ಎಂದು ಸಚಿವ ಹೇಳಿದರು. ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಗೋಹತ್ಯೆ ತಪ್ಪು ಅಥವಾ ಪಾಪ ಅನ್ನೋದಾದರೆ ಸಸ್ಯಹಾರ ತಿನ್ನುವುದು ಕೂಡ ತಪ್ಪು, ಯಾಕೆಂದರೆ, ಗಿಡಮಗಳು, ಸಸಿಗಳು ಸಹ ಉಸಿರಾಡುತ್ತವೆ, ಅವುಗಳಿಗೂ ಜೀವ ಇರುತ್ತದೆ ಎಂದರು. ಒಬ್ಬ ಹಿಂದೂ ಆಗಿ ತಾವೂ ಕೂಡ ಗೋವಿನ ಪೂಜೆ ಮಾಡಿರುವುದಾಗಿ ಹೇಳಿದ ಪರಮೇಶ್ವರ್ ಎಕನಾಮಿಕ್ಸ್ ಮತ್ತು ನಂಬಿಕೆ ಎರಡು ಭಿನ್ನ ವಿಷಯಗಳು ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ