Video: ದಸರಾ ದೇಣಿಗೆಗೆಂದು ಆಸ್ಪತ್ರೆಗೆ ಬಂದು ನರ್ಸ್​ ಮೇಲೆ ಹಲ್ಲೆ ನಡೆಸಿ, ದರ ದರನೆ ಎಳೆದೊಯ್ದ ತೃತೀಯಲಿಂಗಗಳು

Updated on: Sep 25, 2025 | 9:01 AM

ದಸರಾ ದೇಣಿಗೆ ಕೇಳಲು ಆಸ್ಪತ್ರೆಗೆ ಬಂದ ತೃತೀಯಲಿಂಗಿಗಳ ಗುಂಪು ನರ್ಸ್​​ ಮೇಲೆ ಹಲ್ಲೆ ನಡೆಸಿ ದರ ದರನೆ ಎಳೆದೊಯ್ದಿರುವ ಆಘಾತಕಾರಿ ವಿಡಿಯೋ ವೈರಲ್ ಆಗಿದೆ. ಈ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ. ಈ ಆಸ್ಪತ್ರೆ ಜಿಲ್ಲೆಯ ಕಂದುಕೂರು ಪ್ರದೇಶದಲ್ಲಿದೆ. ಆರು ಮಂದಿ ತೃತೀಯಲಿಂಗಿಗಳು ಕುಡಿದ ಮತ್ತಿನಲ್ಲಿ ಆಸ್ಪತ್ರೆಗೆ ನುಗ್ಗಿ ನರ್ಸ್‌ಗೆ ಏಕಾಏಕಿ ಥಳಿಸಲು ಪ್ರಾರಂಭಿಸಿದರು, ತಾವು ಕೇಳಿದಷ್ಟು ದೇಣಿಗೆ ಕೊಡದ ಕಾರಣ ಅವರು ಕೋಪಗೊಂಡಿದ್ದರು ಎಂದು ಹೇಳಲಾಗುತ್ತಿದೆ.ಆರೋಪಿಯು ನರ್ಸ್‌ನ ಕೂದಲನ್ನು ಹಿಡಿದು ಬಾಗಿಲ ಬಳಿ ಎಳೆದೊಯ್ದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲಿದ್ದ ವ್ಯಕ್ತಿಯೊಬ್ಬ ಸಹಾಯಕ್ಕೆ ಬಂದು ಅವರನ್ನು ತಡೆಯಲು ಯತ್ನಿಸಿದರೂ ಸಾಧ್ಯವಾಗಿಲ್ಲ.

ನೆಲ್ಲೂರು, ಸೆಪ್ಟೆಂಬರ್ 25: ದಸರಾ ದೇಣಿಗೆ ಕೇಳಲು ಆಸ್ಪತ್ರೆಗೆ ಬಂದ ತೃತೀಯಲಿಂಗಿಗಳ ಗುಂಪು ನರ್ಸ್​​ ಮೇಲೆ ಹಲ್ಲೆ ನಡೆಸಿ ದರ ದರನೆ ಎಳೆದೊಯ್ದಿರುವ ಆಘಾತಕಾರಿ ವಿಡಿಯೋ ವೈರಲ್ ಆಗಿದೆ. ಈ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ. ಈ ಆಸ್ಪತ್ರೆ ಜಿಲ್ಲೆಯ ಕಂದುಕೂರು ಪ್ರದೇಶದಲ್ಲಿದೆ. ಆರು ಮಂದಿ ತೃತೀಯಲಿಂಗಿಗಳು ಕುಡಿದ ಮತ್ತಿನಲ್ಲಿ ಆಸ್ಪತ್ರೆಗೆ ನುಗ್ಗಿ ನರ್ಸ್‌ಗೆ ಏಕಾಏಕಿ ಥಳಿಸಲು ಪ್ರಾರಂಭಿಸಿದರು, ತಾವು ಕೇಳಿದಷ್ಟು ದೇಣಿಗೆ ಕೊಡದ ಕಾರಣ ಅವರು ಕೋಪಗೊಂಡಿದ್ದರು ಎಂದು ಹೇಳಲಾಗುತ್ತಿದೆ.ಆರೋಪಿಯು ನರ್ಸ್‌ನ ಕೂದಲನ್ನು ಹಿಡಿದು ಬಾಗಿಲ ಬಳಿ ಎಳೆದೊಯ್ದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲಿದ್ದ ವ್ಯಕ್ತಿಯೊಬ್ಬ ಸಹಾಯಕ್ಕೆ ಬಂದು ಅವರನ್ನು ತಡೆಯಲು ಯತ್ನಿಸಿದರೂ ಸಾಧ್ಯವಾಗಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More