ಲಂಚಕ್ಕೆ ಬೇಡಿಕೆಯಿಟ್ಟ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಇಲಾಖಾ ತನಿಖೆಗೆ ಆದೇಶ: ಆರ್ ಬಿ ತಿಮ್ಮಾಪುರ, ಅಬಕಾರಿ ಸಚಿವ

|

Updated on: Nov 28, 2024 | 3:22 PM

ಅಬಕಾರಿ ಇಲಾಖೆಯಲ್ಲಿ ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಎಲ್ಲ ಸರ್ಕಾರಗಳ ಅವಧಿಯಲ್ಲಿ ಮಾತು ಕೇಳಿಬರುತ್ತಿವೆ, ಭ್ರಷ್ಟ ಅಧಿಕಾರಿಗಳು ಇಲಾಖೆಯಲ್ಲಿರೋದು ಸುಳ್ಳಲ್ಲ, ಅದರೆ ಪರವಾನಿಗೆಗಾಗಿ ಲಂಚ ಕೇಳುವ ಅಧಿಕಾರಿಗಳ ವಿರುದ್ಧ ತಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಸಚಿವ ತಿಮ್ಮಾಪುರ ಹೇಳಿದರು.

ಬೆಂಗಳೂರು: ಭ್ರಷ್ಟ ಅಧಿಕಾರಿಗಳಿಗೆ ಯಥೇಚ್ಛವಾಗಿ ಮೇಯಲು ಅವಕಾಶವಿರೋದು ಅಬ್ಕಾರಿ ಇಲಾಖೆಯಲ್ಲಿ. ಮಂಡ್ಯದ ಚಂದೂಪೂರನಲ್ಲಿ ಬಾರ್ ಅಂಡ್ ರೆಸ್ಟುರಾಂಟ್ ತೆರೆಯಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ ಪುನೀತ್ ಹೆಸರಿನ ವ್ಯಕ್ತಿ ಅಬ್ಕಾರಿ ಡಿಸಿ ರವಿಶಂಕರ್ ಎನ್ನುವವರು ₹ 40 ಲಕ್ಷ ಲಂಚಕ್ಕೆ ಡಿಮ್ಯಾಂಡ್ ಮಾಡಿದರೆಂದು ಸಾಕ್ಷಿ ಸಮೇತ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ವಿಷಯದ ಬಗ್ಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ, ರವಿಶಂಕರ್ ಮತ್ತು ಇನ್ಸ್​ಪೆಕ್ಟರ್ ಶಿವಶಂಕರ್ ವಿರುದ್ಧ ಕ್ರಮ ಜರುಗಿಸಲಾಗುವುದು ಮತ್ತು ಇಲಾಖಾ ತನಿಖೆಗೆ ಆದೇಶ ನೀಡಲಾಗುವುದು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಆರ್​ಬಿ ತಿಮ್ಮಾಪುರ ಆಪ್ತನಿಂದ ವಂಚನೆ ಆರೋಪ: ರಾಜ್ಯಪಾಲರಿಗೆ ದೂರು ನೀಡಿದ್ದೇ ಅಬಕಾರಿ ಇಲಾಖೆಯ ಅಧಿಕಾರಿ!