ಅಮೆರಿಕದ ವೈಟ್​ಹೌಸ್​ನಲ್ಲೂ ದೀಪಾವಳಿ ಸಂಭ್ರಮ; ಹಿಂದಿ ಗೀತೆ ನುಡಿಸಿದ ಮಿಲಿಟರಿ ಬ್ಯಾಂಡ್

Updated on: Oct 31, 2024 | 7:29 PM

ಅಮೆರಿಕದ ವೈಟ್ ಹೌಸ್​ನಲ್ಲಿ ದೀಪಾವಳಿ ಸಮಾರಂಭ ಜೋರಾಗಿದೆ. ಹಿಂದಿ ಭಕ್ತಿಗೀತೆಯಾದ 'ಓಂ ಜೈ ಜಗದೀಶ್ ಹರೇ' ಹಾಡನ್ನು ಅಮೆರಿಕದ ಮಿಲಿಟರಿ ಬ್ಯಾಂಡ್ ನುಡಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ವೈರಲ್ ಆಗಿದೆ. ಗೀತಾ ಗೋಪಿನಾಥ್ ಅಮೆರಿಕದ ಮಿಲಿಟರಿ ಬ್ಯಾಂಡ್‌ನ ಮೋಡಿ ಮಾಡುವ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ವಾಷಿಂಗ್ಟನ್: ಯುಎಸ್ ಅಧ್ಯಕ್ಷ ಜೋ ಬೈಡೆನ್ ಇತ್ತೀಚೆಗೆ ಶ್ವೇತಭವನದಲ್ಲಿ ದೀಪಾವಳಿ ಕಾರ್ಯಕ್ರಮ ಆಯೋಜಿಸಿದ್ದರು. ಅಲ್ಲಿ ಮಿಲಿಟರಿ ಬ್ಯಾಂಡ್​ನಿಂದ ಭಕ್ತಿಗೀತೆಯಾದ “ಓಂ ಜೈ ಜಗದೀಶ್ ಹರೇ” ನುಡಿಸಲಾಯಿತು. ಇಂಟರ್​ನ್ಯಾಷನಲ್ ಮಾನಿಟರಿ ಫಂಡ್ (IMF)ನ ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಅವರು ಈ ವೀಡಿಯೊವನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More