16 ಭರ್ಜರಿ ಸಿಕ್ಸ್: ಎಬಿಡಿಯ ವಿಶ್ವ ದಾಖಲೆಯ ಶತಕ
ಎಬಿಡಿ ಆರ್ಭಟದೊಂದಿಗೆ ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ 50 ಓವರ್ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 432 ರನ್‌ಗಳು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು 50 ಓವರ್ಗಳಲ್ಲಿ 291 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಸೌತ್ ಆಫ್ರಿಕಾ ತಂಡವು 148 ರನ್ಗಳ ಭರ್ಜರಿ ಜಯ ಸಾಧಿಸಿತ್ತು. ಆಫ್ರಿಕಾ ಪಡೆಯ ಈ ಅಮೋಘ ಗೆಲುವಿಗೆ ಇಂದು 11 ವರ್ಷಗಳು ತುಂಬಿವೆ.
ಅಬ್ರಹಾಂ ಬೆಂಜಮಿನ್ ಡಿ ವಿಲಿಯರ್ಸ್ ಅಲಿಯಾಸ್ ಎಬಿಡಿ… ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ವಿಸ್ಫೋಟಕ ಸೆಂಚುರಿ ಸಿಡಿಸಿ ಇಂದಿಗೆ ಬರೋಬ್ಬರಿ 11 ವರ್ಷಗಳಾಗಿವೆ. ಜನವರಿ 18, 2015 ರಂದು ಜೋಹಾನ್ಸ್ಬರ್ಗ್ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಎಬಿ ಡಿವಿಲಿಯರ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು.
ಈ ಸಿಡಿಲಬ್ಬರದೊಂದಿಗೆ ಎಬಿಡಿ ಕೇವಲ 31 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಅಷ್ಟೇ ಅಲ್ಲದೆ ಕೇವಲ 44 ಎಸೆತಗಳಲ್ಲಿ 16 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 149 ರನ್ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದರು. ಅಂದು ಎಬಿಡಿ ಬರೆದ ವಿಶ್ವ ದಾಖಲೆಗಳ ಸಂಕ್ಷಿಪ್ತ ವಿವರಗಳು ಈ ಕೆಳಗಿನಂತಿದೆ…
-
ಅತೀ ವೇಗದ ಏಕದಿನ ಶತಕ: 31 ಎಸೆತಗಳಲ್ಲಿ 100 ರನ್ ( ಈ ಹಿಂದೆ ಈ ದಾಖಲೆ ನ್ಯೂಝಿಲೆಂಡ್ನ ಕೋರಿ ಆಂಡರ್ಸನ್ ಹೆಸರಿನಲ್ಲಿತ್ತು. ಅ್ಯಂಡರ್ಸನ್ 36 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಈ ದಾಖಲೆ ಬರೆದಿದ್ದರು).
-
ಅತೀ ವೇಗದ ಏಕದಿನ ಅರ್ಧಶತಕ: 16 ಎಸೆತಗಳಲ್ಲಿ 50 ರನ್ (ಸನತ್ ಜಯಸೂರ್ಯ ಅವರ 17 ಎಸೆತಗಳ ದಾಖಲೆಯನ್ನು ಎಬಿಡಿ ಅಳಿಸಿ ಹಾಕಿದ್ದರು).
-
ಅತ್ಯುತ್ತಮ ಸ್ಟ್ರೈಕ್ ರೇಟ್ (ಕನಿಷ್ಠ 50 ರನ್): 338.63 (44 ಎಸೆತಗಳಲ್ಲಿ 149 ರನ್‌ಗಳು).
-
ಅತಿ ಹೆಚ್ಚು ಸಿಕ್ಸರ್‌ಗಳು: 16 ಸಿಕ್ಸರ್ (ಆ ಸಮಯದಲ್ಲಿ ಇನಿಂಗ್ಸ್ವೊಂದರಲ್ಲಿ 16 ಸಿಕ್ಸ್ ಸಿಡಿಸಿದ್ದ ರೋಹಿತ್ ಶರ್ಮಾ ಅವರ ದಾಖಲೆಯನ್ನು ಸರಿಗಟ್ಟಿದ್ದರು).