ದೇವಿರಮ್ಮ ಬೆಟ್ಟದ ಮೇಲೆ ಮೂವರು ‌ಭಕ್ತರು ಅಸ್ವಸ್ಥ: ಚಿಕ್ಕಮಗಳೂರು  ಆಸ್ಪತ್ರೆಗೆ ದಾಖಲು

Edited By:

Updated on: Oct 20, 2025 | 9:44 AM

6 ಸಾವಿರ ಅಡಿ ಎತ್ತರದ ಬೆಟ್ಟದ ಮೇಲೆ ನೆಲೆಸಿರುವ ದೇವಿರಮ್ಮನ ದರ್ಶನಕ್ಕೆ ತೆರಳಿದ್ದ ಮೂವರ ಭಕ್ತರು ಅಸ್ವಸ್ಥಗೊಂಡಿದ್ದಾರೆ. ಓರ್ವ ವ್ಯಕ್ತಿಯ ಕಾಲು ಮುರಿತವಾಗಿದ್ದರೆ, ಮತ್ತಿಬ್ಬರು ಮಹಿಳೆಯರು ಅಸ್ವಸ್ಥಗೊಂಡಿದ್ದಾರೆ. ಪ್ರಾಥಮಿಕ ‌ಚಿಕಿತ್ಸೆ ನೀಡಿ ಚಿಕ್ಕಮಗಳೂರು ನಗರದ ಆಸ್ಪತ್ರೆಗೆ ಅವರನ್ನು ‌ರವಾನಿಸಲಾಗಿದೆ. ರಾತ್ರಿಯಿಡೀ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಧಾರಾಕಾರ ಮಳೆಯಾಗಿದ್ದು, ಭಾರಿ ಮಳೆ ನಡುವೆಯೂ ಬೆಟ್ಟ ಏರಿ ಭಕ್ತರು ಶಕ್ತಿದೇವತೆ ದರ್ಶನ ಮಾಡುತ್ತಿದ್ದಾರೆ.

ಚಿಕ್ಕಮಗಳೂರು, ಅಕ್ಟೋಬರ್​ 20: ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ದೇವಿರಮ್ಮ ಬೆಟ್ಟದ (Deviramma Hill) ಮೇಲೆ ಮೂವರು ‌ಭಕ್ತರು ಅಸ್ವಸ್ಥರಾದ ಘಟನೆ ನಡೆದಿದೆ. 6 ಸಾವಿರ ಅಡಿ ಎತ್ತರದ ಬೆಟ್ಟದ ಮೇಲೆ ಅಸ್ವಸ್ಥಗೊಂಡಿದ್ದ ಭಕ್ತರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಬೆಟ್ಟದಿಂದ ಕೆಳಗೆ ಸಾಗಿಸಿದ್ದಾರೆ. ಓರ್ವ ವ್ಯಕ್ತಿಯ ಕಾಲು ಮುರಿತವಾಗಿದ್ದರೆ, ಮತ್ತಿಬ್ಬರು ಮಹಿಳೆಯರು ಅಸ್ವಸ್ಥಗೊಂಡಿದ್ದಾರೆ. ಪ್ರಾಥಮಿಕ ‌ಚಿಕಿತ್ಸೆ ನೀಡಿ ಚಿಕ್ಕಮಗಳೂರು ನಗರದ ಆಸ್ಪತ್ರೆಗೆ ಅವರನ್ನು ‌ರವಾನಿಸಲಾಗಿದೆ. ರಾತ್ರಿಯಿಡೀ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಧಾರಾಕಾರ ಮಳೆಯಾಗಿದ್ದು, ಭಾರಿ ಮಳೆ ನಡುವೆಯೂ ಬೆಟ್ಟ ಏರಿ ಭಕ್ತರು ಶಕ್ತಿದೇವತೆ ದರ್ಶನ ಮಾಡುತ್ತಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಯವರೆಗೂ ಬೆಟ್ಟ ಏರುವುದಕ್ಕೆ ಅವಕಾಶ ಇದ್ದು, 50 ಸಾವಿರಕ್ಕೂ ‌ಹೆಚ್ಚು ಭಕ್ತರು ನಿನ್ನೆ ಬೆಟ್ಟ ಏರಿ ದೇವಿಯ ದರ್ಶನ ಮಅಡಿದ್ದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.