ಬಿಗ್​ ಬಾಸ್​ ಮಿನಿ ಸೀಸನ್​ ನಿರೂಪಣೆಗೆ ಸುದೀಪ್​ ಬರೋದು ಪಕ್ಕಾ; ಆದರೆ ಯಾವಾಗ?

| Updated By: ರಾಜೇಶ್ ದುಗ್ಗುಮನೆ

Updated on: Aug 14, 2021 | 3:14 PM

ಬಿಗ್​ ಬಾಸ್​ ಮಿನಿ ಸೀಸನ್​ ಕೆಲವೇ ದಿನಗಳ ಕಾಲ ನಡೆಯಲಿದೆ. ಸಾಕಷ್ಟು ಸೆಲೆಬ್ರಿಟಿಗಳು ಬಿಗ್​ ಬಾಸ್​ ಮನೆ ಪ್ರವೇಶ ಮಾಡಿದ್ದಾರೆ. ಇಷ್ಟು ದಿನ ಕೇವಲ ಹೊರಗಿನಿಂದ ಬಿಗ್​ ಬಾಸ್​ ಮನೆ ನೋಡುತ್ತಿದ್ದ ಸೀರಿಯಲ್​ ಕಲಾವಿದರಿಗೆ ಬಿಗ್​ ಬಾಸ್​ ಮನೆ ಒಳಗೆ ಕಾಲಿಡುವ ಅವಕಾಶ ಸಿಕ್ಕಿದೆ.

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಪೂರ್ಣಗೊಂಡ ಬೆನ್ನಲ್ಲೇ ಮಿನಿ ಬಿಗ್​ ಬಾಸ್​ ಆರಂಭಕ್ಕೆ ಕಲರ್ಸ್​ ಕನ್ನಡ ವಾಹಿನಿ ಸಿದ್ಧತೆ ನಡೆಸಿದೆ. ಈಗಾಗಲೇ ಕಲರ್ಸ್​ ಕನ್ನಡ ವಾಹಿನಿ ಸೀರಿಯಲ್​ನಲ್ಲಿ ನಟಿಸುತ್ತಿರುವ ಕಲಾವಿದರು ಬಿಗ್​ ಬಾಸ್​ ಮನೆ ಪ್ರವೇಶ ಮಾಡಿದ್ದಾರೆ. ಈಗ ವೀಕೆಂಡ್​ನಲ್ಲಿ ಈ ಎಪಿಸೋಡ್​ ನಡೆಸಿ ಕೊಡೋರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಬಿಗ್​ ಬಾಸ್​ ಮಿನಿ ಸೀಸನ್​ ಕೆಲವೇ ದಿನಗಳ ಕಾಲ ನಡೆಯಲಿದೆ. ಸಾಕಷ್ಟು ಸೆಲೆಬ್ರಿಟಿಗಳು ಬಿಗ್​ ಬಾಸ್​ ಮನೆ ಪ್ರವೇಶ ಮಾಡಿದ್ದಾರೆ. ಇಷ್ಟು ದಿನ ಕೇವಲ ಹೊರಗಿನಿಂದ ಬಿಗ್​ ಬಾಸ್​ ಮನೆ ನೋಡುತ್ತಿದ್ದ ಸೀರಿಯಲ್​ ಕಲಾವಿದರಿಗೆ ಬಿಗ್​ ಬಾಸ್​ ಮನೆ ಒಳಗೆ ಕಾಲಿಡುವ ಅವಕಾಶ ಸಿಕ್ಕಿದೆ. ಕೆಲವೇ ದಿನಗಳ ಕಾಲ ಹೊರ ಜಗತ್ತಿನ ಸಂಪರ್ಕ ತೊರೆದು ಧಾರಾವಾಹಿ ಕಲಾವಿದರು ಬಿಗ್​ ಬಾಸ್​ ಮನೆ ಒಳಗೆ ಹೋಗಿದ್ದಾರೆ. ಶನಿವಾರ ಹಾಗೂ ಭಾನುವಾರ ಗ್ರ್ಯಾಂಡ್​ ಓಪನಿಂಗ್​ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಬಿಗ್​ ಬಾಸ್​  ನಡೆಸಿಕೊಡೋರು ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಇದನ್ನೂ ಓದಿ: ‘ಬಿಗ್​ ಬಾಸ್​ ಸೀಸನ್ 9’ ಆರಂಭ ಯಾವಾಗ? ಪರಮೇಶ್ವರ್​ ಗುಂಡ್ಕಲ್​ ಕೊಟ್ರು ಉತ್ತರ