SM Krishna No More: ಮಾಜಿ ಮುಖ್ಯಮಂತ್ರಿಯ ಅಂತ್ಯ ಸಂಸ್ಕಾರಕ್ಕೆ ಬಳಕೆಯಾಗಲಿದೆ ಒಂದು ಟನ್ ಗಂಧದ ಕಟ್ಟಿಗೆ

ಅರುಣ್​ ಕುಮಾರ್​ ಬೆಳ್ಳಿ

Updated on: Dec 11, 2024 | 1:43 PM

ಹಿಂದೆ ವರನಟ ಡಾ ರಾಜ್ ಕುಮಾರ್ ಮತ್ತು ಚಿತ್ರನಟ ಹಾಗೂ ರಾಜಕಾರಣಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ಸಂಸ್ಕಾರಕ್ಕೂ ಗಂಧದ ಮರ ತುಂಡುಗಳನ್ನು ಬಳಸಲಾಗಿತ್ತು ಎಂದು ಅರಣ್ಯಾಧಿಕಾರಿ ಮಹಾದೇವ ಹೇಳುತ್ತಾರೆ. ಹಿರಿಯ ಮುತ್ಸದ್ದಿಯಾಗಿದ್ದ ಎಸ್ ಎಂ ಕೃಷ್ಣ ಅವರ ಅಂತ್ಯಸಂಸ್ಕಾರ ಹುಟ್ಟೂರು ಸೋಮನಹಳ್ಳಿಯಲ್ಲಿ ಇಂದು ನಡೆಯಲಿದೆ.

ಮಂಡ್ಯ: ನಮ್ಮ ಮೈಸೂರು ವರದಿಗಾರ ಹೇಳುವ ಪ್ರಕಾರ ಎಸ್ ಎಂ ಕೃಷ್ಣ ಅವರು ನಮ್ಮ ದೇಶ ಕಂಡ ಅಪರೂಪದ ರಾಜಕಾರಣಿ. ಅವರ ಅಂತ್ಯ ಸಂಸ್ಕಾರಕ್ಕಾಗಿ 1000 ಕೇಜಿಯಷ್ಟು ಗಂಧದ ಮರ ತುಂಡುಗಳನ್ನು ಬಳಸಲಾಗುತ್ತಿದೆ. ಮೈಸೂರು ವಲಯದ ಎಸಿಎಫ್ ಮಹಾದೇವ ಹೇಳುವ ಹಾಗೆ ಗಂಧದ ಮರ ತುಂಡುಗಳನ್ನು ಮೈಸೂರಿನ ಗಂಧದ ಕೋಠಿಯಿಂದ ತರಿಸಲಾಗಿದೆ. ಬೇರೆ ಬೇರೆ ಸೈಜು ಮತ್ತು ಆಕಾರದ ಮರದ ತುಂಡುಗಳನ್ನು ಮಿನಿಟ್ರಕ್​ನಲ್ಲಿ ತರಿಸಲಾಗಿದೆ ಮತ್ತು ಅಂತ್ಯ ಸಂಸ್ಕಾರಕ್ಕೆ ಗಂಧದ ಮರ ತುಂಡುಗಳೊಂದಿಗೆ ಬೇರೆ ಮರಗಳ ತುಂಡುಗಳನ್ನೂ ಬಳಸುವ ಸಾಧ್ಯತೆ ಇದೆಯೆಂದು ಅರಣ್ಯಾಧಿಕಾರಿ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  SM Krishna No More: ಒಬ್ಬ ವ್ಯಕ್ತಿಯಾಗಿಯೂ ಎಸ್​ಎಂ ಕೃಷ್ಣ ಪ್ರತಿಯೊಬ್ಬರಿಗೆ ಆದರ್ಶಪ್ರಾಯ: ಡಿಕೆ ಸುರೇಶ್

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.