ಬೆಳಗಾವಿ ಅಧಿವೇಶನ: ಸ್ವಪಕ್ಷದವರನ್ನೇ ಟೀಕಿಸಿ ಅರಗಿಸಿಕೊಳ್ಳುವ ತಾಕತ್ತು ಕೇವಲ ಬಸನಗೌಡ ಯತ್ನಾಳ್ ಗೆ ಮಾತ್ರ ಇದೆ: ಸಿದ್ದರಾಮಯ್ಯ

|

Updated on: Dec 15, 2023 | 4:20 PM

ಡಿಕೆ ಶಿವಕುಮಾರ್ ಎದ್ದು ನಿಂತು, ಸಿಎಂ ಸೀಟಿಗೆ ಎಷ್ಟು ಕೋಟಿ, ವ್ಯಾಪಾರ ಹೇಗೆಲ್ಲ ನಡೆಯುತ್ತೆ ಅಂತ ಹೇಳಿದ್ದೀರಲ್ಲ, ಅದನ್ನು ಪುನಃ ಹೇಳಿ ಕೇಳೋಣ ಅನ್ನುತ್ತಾರೆ. ಅದಕ್ಕೆ ಯತ್ನಾಳ್ ಸಮಯ ಬರಲಿ ಎಲ್ಲವನ್ನೂ ಹೇಳ್ತೀನಿ, ಎಲ್ಲರ ಬಂಡವಾಳ ಬಯಲು ಮಾಡ್ತೀನಿ ಅನ್ನುತ್ತಾರೆ.

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ಅಧಿವೇಶನದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರನ್ನು (Basangouda Patil Yatnal) ಹೊಗಳಿದರೋ ಅಥವಾ ಅವರನ್ನು ಹೊಗಳುತ್ತಾ ಬಿಜೆಪಿಯನ್ನು ಮೂದಲಿಸಿದರೋ ಗೊತ್ತಾಗಲಿಲ್ಲ ಸ್ವಾಮಿ. ಅವರ ಮಾತನ್ನು ಕೇಳಿ: ಅವರ ಪಕ್ಷದವರ ವಿರುದ್ಧವೇ ಭ್ರಷ್ಟಾಚಾರದ (corruption) ಆರೋಪ ಮಾಡುವ, ಹೊಂದಾಣಿಕೆ ರಾಜಕೀಯ ಮೊದಲಾದ ವಿಷಯಗಳನ್ನು ಮಾತಾಡುವುದಲ್ಲದೆ ಅವುಗಳನ್ನು ಜೀರ್ಣಿಸಿಕೊಳ್ಳುವ ತಾಕತ್ತು ಕೇವಲ ಯತ್ನಾಳ್ ಗೆ ಮಾತ್ರ ಇದೆ ಅಂತ ಹೇಳುವ ಸಿದ್ದರಾಮಯ್ಯ, ಅವರನ್ನು ಸ್ಟ್ರಾಂಗ್ ಕ್ರಿಟಿಕ್ ಇನ್ ಸೈಡರ್ ಅಂತ ಅದೇ ಕಾರಣಕ್ಕೆ ಹೇಳೋದು ಅಂದರು. ಅದಕ್ಕೆ ಯತ್ನಾಳ್, ಟೀಕೆ ಮಾಡೋರು ರಾಜ್ಯದಲ್ಲಿ ಒಬ್ಬಾರಾದರೂ ಬೇಕಲ್ಲ, ಎಲ್ಲರ ಲೆಕ್ಕಪತ್ರ ಬಿಚ್ಚಿಡ್ತೀನಿ, ತನ್ನ ಯಾವುದೇ ಕ್ರಮ ತೆಗೆದುಕೊಂಡರೂ ಎಂಎಲ್ ಎ ಆಗೋದನ್ನ ಮಾತ್ರ ಯಾರೂ ತಪ್ಪಿಸಲಾರರು, ತಪ್ಪಿಸಿದರೂ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ಬರ್ತೀನಿ ಅಂತ ಹೇಳುತ್ತಾರೆ. ಆಗ ಡಿಕೆ ಶಿವಕುಮಾರ್ ಎದ್ದು ನಿಂತು, ಸಿಎಂ ಸೀಟಿಗೆ ಎಷ್ಟು ಕೋಟಿ, ವ್ಯಾಪಾರ ಹೇಗೆಲ್ಲ ನಡೆಯುತ್ತೆ ಅಂತ ಹೇಳಿದ್ದೀರಲ್ಲ, ಅದನ್ನು ಪುನಃ ಹೇಳಿ ಕೇಳೋಣ ಅನ್ನುತ್ತಾರೆ. ಅದಕ್ಕೆ ಯತ್ನಾಳ್ ಸಮಯ ಬರಲಿ ಎಲ್ಲವನ್ನೂ ಹೇಳ್ತೀನಿ, ಎಲ್ಲರ ಬಂಡವಾಳ ಬಯಲು ಮಾಡ್ತೀನಿ ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ