ವೋಟ್ ಶೇರ್ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ಮೆಗಾ ಪ್ಲ್ಯಾನ್! ಜಿಲ್ಲಾಮಟ್ಟದಲ್ಲೂ ಆಪರೇಷನ್ ಹಸ್ತಕ್ಕೆ ಮುಂದು

|

Updated on: Aug 25, 2023 | 1:10 PM

ಡಿಸಿಎಂ ಡಿಕೆ ಶಿವಕುಮಾರ್ ಒಳಗೊಳಗೆ ಮೆಗಾ ಕಾರ್ಯತಂತ್ರ ನಡೆಸ್ತಿದ್ದಾರೆ. ಜಿಲ್ಲಾಮಟ್ಟದಲ್ಲೂ ಆಪರೇಷನ್ ಹಸ್ತಕ್ಕೆ ಮುಂದಾಗಿದ್ದಾರೆ. ಮುಂಬರುವ ಲೋಕಸಭೆ, ಬಿಬಿಎಂಪಿ ಚುನಾವಣೆಗಳನ್ನ ಗಮನದಲ್ಲಿಟ್ಟುಕೊಂಡು ವೋಟ್ ಶೇರ್ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಮೆಗಾ ಪ್ಲ್ಯಾನ್ ಮಾಡಿದ್ದಾರೆ. ಈಗಾಗಲೇ ಜಿಲ್ಲಾ ಕಾಂಗ್ರೆಸ್ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸ್ಪಷ್ಟ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.

ಆಪರೇಷನ್.. ರಾಜ್ಯ ರಾಜಕಾರಣದಲ್ಲಿ ಕೇಳಿಬರ್ತಿರುವ ಒಂದೇ ಒಂದು ಹೆಸರು ಆಪರೇಷನ್ ಹಸ್ತ.. ಬಿಜೆಪಿ, ಜೆಡಿಎಸ್​ನ ಘಟಾನುಘಟಿ ನಾಯಕರಿಗೆ ಗಾಳ ಹಾಕಿರುವ ಕಾಂಗ್ರೆಸ್ ನಾಯಕರು (Congress), ಈಗಾಗಲೇ ಪಕ್ಷದ ಬಾಗಿಲು ತೆರೆದಿಟ್ಟು ಬಂದವರಿಗೆಲ್ಲ ಆರತಿ ಎತ್ತಿ ಬರಮಾಡಿಕೊಳ್ತಿದ್ದಾರೆ (Operation Hasta). ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟು ಮತ ಬುಟ್ಟಿ ಭದ್ರಗೊಳಿಸಿಕೊಳ್ಳಲು ಶತಾಯಗತಾಯ ಹರಸಾಹಸ ಪಡ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲಲು ಟಾರ್ಗೆಟ್ ನೀಡಿದೆಯಂತೆ. ಹೀಗಾಗಿ ಡಿಸಿಎಂ ಡಿ.ಕೆ ಶಿವಕುಮಾರ್ (KPCC President DK Shivakumar) ಪಕ್ಷ ಸೇರುವವರಿಗೆ ಬಹಿರಂಗವಾಗಿಯೇ ಆಹ್ವಾನ ನೀಡಿದ್ದಾರೆ.

ಅಷ್ಟಕ್ಕೂ ಓಪನ್ ಆಫರ್ ಕೊಟ್ಟಿರುವ ಡಿಸಿಎಂ ಡಿಕೆ ಶಿವಕುಮಾರ್ ಸುಮ್ಮನೇ ಕೂತಿಲ್ಲ. ಒಳಗೊಳಗೆ ಕಾರ್ಯತಂತ್ರವನ್ನೂ ನಡೆಸ್ತಿದ್ದಾರೆ. ಜಿಲ್ಲಾಮಟ್ಟದಲ್ಲೂ ಆಪರೇಷನ್ ಹಸ್ತಕ್ಕೆ ಮುಂದಾಗಿದ್ದಾರೆ. ಮುಂಬರುವ ಲೋಕಸಭೆ, ಬಿಬಿಎಂಪಿ ಚುನಾವಣೆಗಳನ್ನ ಗಮನದಲ್ಲಿಟ್ಟುಕೊಂಡು ವೋಟ್ ಶೇರ್ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಮೆಗಾ ಪ್ಲ್ಯಾನ್ ಮಾಡಿದ್ದಾರೆ. ಈಗಾಗಲೇ ಜಿಲ್ಲಾ ಕಾಂಗ್ರೆಸ್ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸ್ಪಷ್ಟ ಸಂದೇಶ ನೀಡಿದ್ದಾರೆ ಎನ್ನಲಾಗಿದೆ. ಹೀಗೆಂದ ಮಾತ್ರಕ್ಕೆ ಸಿಕ್ಕಸಿಕ್ಕವರೆನ್ನೆಲ್ಲ ಪಕ್ಷ ಸೇರುವ ಸಾಧ್ಯತೆ ಇರೋದ್ರಿಂದ ಕೆಲ ಸಂದೇಶಗಳನ್ನೂ ನೀಡಿದ್ದಾರೆ. ಯಾರನ್ನೇ ಪಕ್ಷಕ್ಕೆ ಸೇರಿಸಿಕೊಂಡರೂ ಗಮನಕ್ಕೆ ತಂದು ಸೇರ್ಪಡೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಯಾರಾದರೂ ವಿವಾದಿತ ವ್ಯಕ್ತಿಗಳಿದ್ರೆ, ಹೆಚ್ಚು ಕಂಡಿಷನ್ ಹಾಕುವವರಿದ್ದರೆ ನಮ್ಮ ಗಮನಕ್ಕೆ ತನ್ನಿ. ಸಮಸ್ಯೆ ಇಲ್ಲದಿದ್ರೆ ಜಿಲ್ಲಾ ಮಟ್ಟದಲ್ಲಿ ನಾಯಕರನ್ನು ಸೇರಿಸಿಕೊಳ್ಳಿ ಅಂತ ಹೇಳಿದ್ದಾರೆ.

ಒಂದ್ಕಡೆ ಬೇರೆ ಪಕ್ಷದವರನ್ನ ಕಾಂಗ್ರೆಸ್​ಗೆ ಸೇರಿಸಿಕೊಳ್ಳ ನಾಯಕರು ಉತ್ಸಾಹದಲ್ಲಿದ್ರೂ ಆಪರೇಷನ್ ಹಸ್ತಕ್ಕೆ ಸ್ವಪಕ್ಷೀಯ ನಾಯಕರಿಂದಲೇ ಅಸಮಾಧಾನ ವ್ಯಕ್ತವಾಗಿದೆ. ಅಭ್ಯರ್ಥಿಗಳು ವಾಪಸ್ ಬಂದ್ರೆ ತಮಗೆ ಅವಕಾಶ ವಂಚನೆಯಾಗುತ್ತೆ. ತಮ್ಮ ಬಾಗಿಲು ಮುಚ್ಚುತ್ತೆ ಎಂದು ಕೆಲವರು ಬೇಸರಗೊಂಡಿದ್ದಾರೆ. ಹೀಗಾಗಿ ನಿಗದಿತ ಸೂತ್ರದ ಆಧಾರದ ಮೇಲೆ ಆಪರೇಷನ್ ಹಸ್ತ ಮಾಡಲಾಗುತ್ತೆ ಅಂತ ಅಸಮಾಧಾನಗೊಂಡಿರುವ ಶಾಸಕರಿಗೂ ಡಿಕೆ ಸಮಾಧಾನ ಮಾಡಿದ್ದಾರೆ. ಅಭ್ಯರ್ಥಿಗಳು ನಿರಂತರ ಸ್ಪರ್ಧೆ ಮಾಡದಿರುವ ಕಡೆ, ಅಭ್ಯರ್ಥಿಗಳು ಪ್ರಬಲವಾಗಿಲ್ಲದ ಕಡೆ ಆಪರೇಷನ್ ಮಾಡಲಾಗುತ್ತೆ ಅಂತ ಹೇಳಿದ್ದಾರೆ. ಪ್ರಬಲ ಅಭ್ಯರ್ಥಿಗಳಿರುವ ಕಡೆ ಯಾರನ್ನೂ ಸೇರಿಸಿಕೊಳ್ಳಲ್ಲ, ಜೊತೆಗೆ ಯಾರಿಗೂ ಅಧಿಕಾರದ ಭರವಸೆ ನೀಡಿ ಕರೆ ತರುತ್ತಿಲ್ಲ ಅಂತ ಆತಂಕ ಹೊರಹಾಕಿದ್ದ ಮುಖಂಡರಿಗೆ ಡಿಕೆ ಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲವನ್ನೂ ವಿವರಿಸಿಯೇ ಪಕ್ಷಕ್ಕೆ ಕರೆತರುತ್ತಿದ್ದೇವೆ ಅನ್ನೋದನ್ನ ಡಿಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ನಮ್ಮ ಓಟ್ ಶೇರ್ ಹೆಚ್ಚಳ ಮಾತ್ರ ನಮ್ಮ ಉದ್ದೇಶ, ನಮ್ಮ ಕಾರ್ಯಕರ್ತರೇ ನಮಗೆ ಮೊದಲ ಆದ್ಯತೆ ಅಂತ ಜಿಲ್ಲಾ ಮಟ್ಟದ ನಾಯಕರಿಗೆ ಡಿ.ಕೆ ಶಿವಕುಮಾರ್ ಸಂದೇಶ ಸಾರಿದ್ದಾರೆ.