ಅಪರೇಶನ್ ಹಸ್ತ ಡಿಕೆ ಶಿವಕುಮಾರ್ ಆಡುತ್ತಿರುವ ಒಂದು ನಾಟಕ, ಬೇರೇನೂ ಅಲ್ಲ: ರಮೇಶ್ ಜಾರಕಿಹೊಳಿ, ಬಿಜೆಪಿ ಶಾಸಕ

ಅರುಣ್​ ಕುಮಾರ್​ ಬೆಳ್ಳಿ

Updated on: Sep 04, 2023 | 6:07 PM

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದ 20-25 ಹಿರಿಯ ಕಾಂಗ್ರೆಸ್ ಶಾಸಕರು, ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ಸಭೆ ನಡೆಸಿದ್ದರು. ಅದನ್ನು ಪಕ್ಷಕ್ಕಾದ ಅವಮಾನ ಎಂದು ಪರಿಗಣಿಸಿದ ಮಹಾನಾಯಕ ಅದನ್ನು ಜನರಿಂದ ಮತ್ತು ವಿರೋಧ ಪಕ್ಷಗಳಿಂದ ಮುಚ್ಚಿಡಲು ಅಪರೇಷನ್ ಹಸ್ತದ ನಾಟಕ ನಡೆಸುತ್ತಿದ್ದಾರೆ. ಅಸಲಿಗೆ ಅದರಲ್ಲಿಅಂಥದ್ದೇನೂ ಇಲ್ಲ ಎಂದು ರಮೇಶ್ ಹೇಳಿದರು

ಬೆಳಗಾವಿ: ವಿಧಾನ ಸಭಾ ಚುನಾವಣೆಯ (Assembly Polls) ಬಳಿಕ ಹೆಚ್ಚು ಕಡಿಮೆ ನಾಪತ್ತೆಯಂತಾಗಿದ್ದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಇಂದು ಅಥಣಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದರು. ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರನ್ನು ಈಗಲೂ ಮಹಾನಾಯಕನೆಂದೇ ವ್ಯಂಗ್ಯವಾಗಿ ಸಂಬೋಧಿಸುವ ಜಾರಕಿಹೊಳಿ, ಶಿವಕುಮಾರ್ ಆಪರೇಶನ್ ಹಸ್ತ ನಡೆಸುತ್ತಿರುವುದಕ್ಕೆ ಮೂಲ ಕಾರಣ ಏನು ಅಂತ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದ 20-25 ಹಿರಿಯ ಕಾಂಗ್ರೆಸ್ ಶಾಸಕರು, ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ಸಭೆ ನಡೆಸಿದ್ದರು. ಅದನ್ನು ಪಕ್ಷಕ್ಕಾದ ಅವಮಾನ ಎಂದು ಪರಿಗಣಿಸಿದ ಮಹಾನಾಯಕ ಅದನ್ನು ಜನರಿಂದ ಮತ್ತು ವಿರೋಧ ಪಕ್ಷಗಳಿಂದ ಮುಚ್ಚಿಡಲು ಅಪರೇಷನ್ ಹಸ್ತದ ನಾಟಕ ನಡೆಸುತ್ತಿದ್ದಾರೆ. ಅಸಲಿಗೆ ಅದರಲ್ಲಿಅಂಥದ್ದೇನೂ ಇಲ್ಲ, ಯಾವುದೇ ಬಿಜೆಪಿ ಶಾಸಕ ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 04, 2023 06:03 PM
Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.