ಡ್ರೆಸ್ ಮಾಡಿಕೊಂಡು ಕಾರಲ್ಲಿ ಸುತ್ತೋದು ಬಿಟ್ಟರೆ ಪೊನ್ನಣ್ಣ ಮತ್ತು ಮಂಥರ್​ ಗೌಡಗೆ ಬೇರೇನೂ ಗೊತ್ತಿಲ್ಲ: ಪ್ರತಾಪ್ ಸಿಂಹ

ಅರುಣ್​ ಕುಮಾರ್​ ಬೆಳ್ಳಿ

Updated on: Apr 04, 2025 | 8:28 PM

ಎಫ್​ಐಅರ್ ನಲ್ಲಿ ಪೊನ್ನನ್ಣ ಮತ್ತು ಮಂಥರ್ ಗೌಡ ಹೆಸರು ಸೇರಿಸಿದ ಬಳಿಕವೇ ವಿನಯ್ ಸೋಮಯ್ಯ ಅವರ ಅಂತಿಮ ಸಂಸ್ಕಾರ ನಡೆಸಬೇಕೆಂದು ವಿನಯ್ ಕುಟುಂಬಕ್ಕೆ ಮನವಿ ಮಾಡುತ್ತೇನೆ, ಹಿಂದೆ 2015ರಲ್ಲಿ ಇದೇ ತೆರನಾದ ಸಾವೊಂದು ಮೈಸೂರಲ್ಲಿ ಸಂಭವಿಸಿದಾಗ ಸರ್ಕಾರದಿಂದ ಪರಿಹಾರ ಸಿಕ್ಕ ನಂತರವೇ ಅಂತಿಮ ಸಂಸ್ಕಾರ ಮಾಡಿಸಿದ್ದೆ ಎಂದು ಪ್ರತಾಪ್ ಸಿಂಹ ಹೇಳಿದರು.

ಮಡಿಕೇರಿ ಏಪ್ರಿಲ್ 4: ಸಾವಿಗೆ ಶರಣಾದ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಟಿವಿ9ನೊಂದಿಗೆ ಮಾತಾಡಿದ ಈ ಭಾಗದ ಮಾಜಿ ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ಶಾಸಕರಾದ ಎಎಸ್ ಪೊನ್ನಣ್ಣ ಮತ್ತು ಮಂಥರ್ ಗೌಡ ಅವರನ್ನು ತೊಲಗಿಸದ ಹೊರತು ಜಿಲ್ಲೆಗೆ ನೆಮ್ಮದಿ ಇಲ್ಲ ಎಂದು ರೋಷದಲ್ಲಿ ಹೇಳಿದರು. ನೀಟಾಗಿ ಡ್ರೆಸ್ ಮಾಡಿಕೊಂಡು ಕೈಗೆ ದುಬಾರಿ ವಾಚ್​ಗಳನ್ನು ಧರಿಸಿ ಕಾರಲ್ಲಿ ಸುತ್ತುವುದನ್ನು ಬಿಟ್ಟರೆ ಇವರು ಜನರಿಗಾಗಿ ಏನೂ ಮಾಡಿಲ್ಲ, ಬಿಟ್ಟೀ ಕಾಸು ಜಮಾಯಿಸಿಕೊಂಡು, ರಿಯಲ್ ಎಸ್ಟೇಟ್ ಮಾಡಿಕೊಂಡು ಶಾಸಕರಾದವರಿಗೆ ಜನರ ಕಷ್ಟಗಳಿಗೆ ಸ್ಪಂದಿಸುವುದು ಹೇಗೆ ಗೊತ್ತಾದೀತು? ಐದು ಪೈಸೆಯ ಅಭಿವೃದ್ಧಿ ಕಾರ್ಯವನ್ನೇನಾದರೂ ಮಾಡಿದ್ದಾರಾ? ಎಂದು ಪ್ರತಾಪ್ ಜರಿದರು.

ಇದನ್ನೂ ಓದಿ:  ಯತ್ನಾಳ್ ಬಣದವರೆಂದು ಗುರುತಿಸಿಕೊಂಡಿರುವ ಪ್ರತಾಪ್ ಸಿಂಹ ಇವತ್ತಿನ ಬಿಜೆಪಿ ಸಭೆಯಲ್ಲಿ ಪಾಲ್ಗೊಂಡರು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.