ಜನರಿಗೆ ಹೆದರಿಸುವುದನ್ನು ಬಿಟ್ಟು ಡಿಕೆ ಸಹೋದರರು ಬೇರೆ ಯಾವ ಜನಸೇವೆ ಮಾಡಿದ್ದಾರೆ? ಹೆಚ್ ಡಿ ಕುಮಾರಸ್ವಾಮಿ

Updated on: Apr 01, 2024 | 3:55 PM

ಅವರೇ ಪಂಚಾಯಿತಿ ಸದಸ್ಯನಾಗಿ ಕೆಲಸ ಮಾಡುವ ಹಾಗಿದ್ದರೆ ಪಂಚಾಯಿತಿಗಳು ಮತ್ತು ಸದಸ್ಯರು ಯಾಕೆ ಬೇಕು? ಎಂದು ಕೇಳಿದರು. ಡಿಕೆ ಸಹೋದರರು ಆಡುವ ಮಾತಿಗೆ ಮತ್ತು ನಡವಳಿಕೆ ನಡುವೆ ಅಜಗಜಾಂತರ ವ್ಯತ್ಯಾಸವಿದೆ, ಅವರು ಹೇಳಿದ್ದನ್ನು ನಂಬುವ ಅವಶ್ಯಕತೆಯಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನರ ಸೇವೆ ತಾವು ಮಾಡುತ್ತಿರೋದು, ದೆಹಲಿ ಜನ ಮಾಡಲ್ಲ ಅಂತ ಡಿಕೆ ಸಹೋದರರು (DK brothers) ಹೇಳಿದ್ದಾರೆ ಅಂತ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರ ಗಮನಕ್ಕೆ ತಂದಾಗ, ಯಾವ ಸೇವೆಯ ಬಗ್ಗೆ ಅವರು ಮಾತಾಡುತ್ತಾರೆ? ಬೆಂಗಳೂರಲ್ಲಿ ಪ್ಲ್ಯಾನ್ ಅಪ್ರೂವಲ್ ಗೆ (plan approval) ಒಂದು ಚದರ ಅಡಿಗೆ ರೂ. 100 ಹೆಚ್ಚಿಸಿರುವುದು ಸೇವೆನಾ ಅಥವಾ ಜನರನ್ನು ಹೆದರಿಸಿ ಬೆದರಿಸಿ ಅವರಲ್ಲಿ ಭಯ ಹುಟ್ಟಿಸುವುದು ಸೇವೆನಾ ಅಂತ ಪ್ರಶ್ನಿಸಿದರು. ಅವರು ಮಾತ್ರ ಸೇವೆ ಮಾಡುತ್ತಾರೆ ಉಳಿದವರು ನಿದ್ರೆ ಮಾಡುತ್ತಾರಾ? ಡಿಕೆ ಸುರೇಶ್ ಸಂಸತ್ ಸದಸ್ಯನಾಗಿ ಅಲ್ಲ, ಒಂದು ಪಂಚಾಯಿತಿ ಸದಸ್ಯನಂತೆ ಕೆಲಸ ಮಾಡುತ್ತಾರೆ ಅಂತ ಶಿವಕುಮಾರ್ ಹೇಳಿರುವುದನ್ನು ಗೇಲಿ ಮಾಡಿದ ಕುಮಾರಸ್ವಾಮಿ, ಅವರೇ ಪಂಚಾಯಿತಿ ಸದಸ್ಯನಾಗಿ ಕೆಲಸ ಮಾಡುವ ಹಾಗಿದ್ದರೆ ಪಂಚಾಯಿತಿಗಳು ಮತ್ತು ಸದಸ್ಯರು ಯಾಕೆ ಬೇಕು? ಎಂದು ಕೇಳಿದರು. ಡಿಕೆ ಸಹೋದರರು ಆಡುವ ಮಾತಿಗೆ ಮತ್ತು ನಡವಳಿಕೆ ನಡುವೆ ಅಜಗಜಾಂತರ ವ್ಯತ್ಯಾಸವಿದೆ, ಅವರು ಹೇಳಿದ್ದನ್ನು ನಂಬುವ ಅವಶ್ಯಕತೆಯಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ: ಎಸ್​ಎಂ ಕೃಷ್ಣ ಭೇಟಿಯಾದ ಡಿಕೆ ಸುರೇಶ್; ಕುತೂಹಲ ಮೂಡಿಸಿದ ಬಿಜೆಪಿ-ಕಾಂಗ್ರೆಸ್ ನಾಯಕರ ಭೇಟಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More