ನಮ್ಮದು ಭ್ರಷ್ಟಾಚಾರರಹಿತ ಸರ್ಕಾರ, ಲಂಚಗುಳಿತನಕ್ಕೆ ಜೀರೋ ಟಾಲರನ್ಸ್ : ಈಶ್ವರ್ ಖಂಡ್ರೆ, ಅರಣ್ಯ ಸಚಿವ

Updated on: Jun 21, 2025 | 6:30 PM

ಈಶ್ವರ್ ಖಂಡ್ರೆ ಅವರ ಮಾತು ಕೇಳುತ್ತಿದ್ದರೆ ಆಳಂದ್ ಶಾಸಕ ಬಿಅರ್ ಪಾಟೀಲ್ ಕೂಡ ಬಿಜೆಪಿಯವರೇ ಎಂಬ ಗುಮಾನಿ ಮೂಡಲಾರಂಭಿಸುತ್ತದೆ. ಏತನ್ಮಧ್ಯೆ ಆಳಂದ್ ಮಾಜಿ ಶಾಸಕ ಮತ್ತು ಹಿರಿಯ ಬಿಜೆಪಿ ಮುಖಂಡ ಸುಭಾಷ್ ಗುತ್ತೇದಾರ್ ಕಲಬುರಗಿಯಲ್ಲಿ ಪತ್ರಿಕಾ ಗೋಷ್ಠಿಯೊಂದರಲ್ಲಿ ಮಾತಾಡಿ ಬಿಅರ್ ಪಾಟೀಲ್ ಖುದ್ದು ಕಡು ಭ್ರಷ್ಟ, 224 ಶಾಸಕರಲ್ಲಿ ಎಲ್ಲರಿಗಿಂತ ಹೆಚ್ಚು ಭ್ರಷ್ಟ ಎಂದರೆ ಅವರೇ ಎಂದು ಹೇಳಿದ್ದಾರೆ.

ಬೀದರ್, ಜೂನ್ 21: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅರಣ್ಯ ಖಾತೆ ಸಚಿವ ಈಶ್ವರ್ ಖಂಡ್ರೆ ವೈರಲ್ ಅಗಿರುವ ಆಳಂದ್ ಶಾಸಕ ಬಿಅರ್ ಪಾಟೀಲ್ (BR Patil) ಅವರ ಕ್ಲಿಪ್ಪಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿ, ತಮ್ಮ ಸರ್ಕಾರ ಭ್ರಷ್ಟಾಚಾರರಹಿತ ಸರ್ಕಾರ, ಲಂಚಗುಳಿತನಕ್ಕೆ ಜೀರೋ ಟಾಲರನ್ಸ್, ಭ್ರಷ್ಟಾಚಾರದಲ್ಲಿ ಯಾರೇ ತೊಡಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮೀಷನ್ ಅರೋಪ ಮಾಡಿ, ಪೇಸಿಎಮ್ ಅಭಿಯಾನ ನಡೆಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಬಿಜೆಪಿ ಅರೋಪಿಸುತ್ತಿದೆಯಲ್ಲ ಎಂದಾಗ, ಬಿಜೆಪಿಗೆ ಸುಳ್ಳು ಹೇಳುವ ಚಾಳಿ, ತಮ್ಮ ಸರ್ಕಾರದ ಜನಪ್ರತಿಯತೆ ಅದಕ್ಕೆ ಸಹಿಸಲಾಗುತ್ತಿಲ್ಲ ಎಂದು ಖಂಡ್ರೆ ಹೇಳಿದರು.

ಇದನ್ನೂ ಓದಿ:  ಅಲ್ಪ ಅರಣ್ಯವಿರುವ 16 ಜಿಲ್ಲೆಗಳಿಗೆ ವಿಶೇಷ ಯೋಜನೆ ರೂಪಿಸಲು‌ ಸಚಿವ ಈಶ್ವರ್ ಖಂಡ್ರೆ ಸೂಚನೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ