PAK vs BAN: ಕೆಣಕ್ಕಿದ ಬಾಬರ್; ಒಂದೇ ಓವರ್​ನಲ್ಲಿ 18 ರನ್ ಚಚ್ಚಿದ ಲಿಟನ್ ದಾಸ್! ವಿಡಿಯೋ

|

Updated on: Aug 23, 2024 | 10:34 PM

Litton Das: ಬಾಂಗ್ಲಾದೇಶ ಇನ್ನಿಂಗ್ಸ್​ನ 89ನೇ ಓವರ್​ಗೂ ಮುನ್ನ ಬಾಬರ್ ಆಝಂ, ಬ್ಯಾಟಿಂಗ್ ಮಾಡುತ್ತಿದ್ದ ಲಿಟನ್ ದಾಸ್ ಅವರನ್ನು ಕೆಣಕ್ಕಿದರು. ಇದಾದ ಬಳಿಕ ಬಿರುಸಿನ ಬ್ಯಾಟಿಂಗ್ ನಡೆಸಿದ ಲಿಟನ್ ದಾಸ್ ನಸೀಮ್ ಶಾ ಬೌಲ್ ಮಾಡಿದ ಒಂದು ಓವರ್​ನಲ್ಲಿ 18 ರನ್ ಚಚ್ಚಿದರು.

ಪಾಕಿಸ್ತಾನದ ಸೀಮಿತ ಓವರ್​ಗಳ ನಾಯಕ ಬಾಬರ್ ಆಝಂ ತಮ್ಮ ಶಾಂತ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಆದರೆ ಕೆಲವೊಮ್ಮೆ ಬಾಬರ್ ಎದುರಾಳಿ ತಂಡದ ತಂತ್ರಗಾರಿಕೆಯನ್ನು ಬುಡಮೇಲು ಮಾಡುವ ಸಲುವಾಗಿ ಎದುರಾಳಿ ತಂಡದ ಆಟಗಾರ ಸ್ಲೆಡ್ಜ್ ಮಾಡುವುದನ್ನು ನಾವು ಆಗಾಗ್ಗೆ ನೋಡುತ್ತಿವೆ. ಇದೀಗ ಬಾಬರ್, ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಲಿಟನ್ ದಾಸ್ ಅವರನ್ನು ಕೆಣಕ್ಕಿದ್ದಾರೆ. ಸ್ಲೆಡ್ಜ್ ಮಾಡಿದ್ದು ಬಾಬರ್ ಆಝಂ ಆದರೂ ಅದರ ಪರಿಣಾಮವನ್ನು ಮಾತ್ರ ವೇಗಿ ನಸೀಮ್ ಶಾ ಅನುಭವಿಸಬೇಕಾಯಿತು.

ವಾಸ್ತವವಾಗಿ ಬಾಂಗ್ಲಾದೇಶ ಇನ್ನಿಂಗ್ಸ್​ನ 89ನೇ ಓವರ್​ಗೂ ಮುನ್ನ ಬಾಬರ್ ಆಝಂ, ಬ್ಯಾಟಿಂಗ್ ಮಾಡುತ್ತಿದ್ದ ಲಿಟನ್ ದಾಸ್ ಅವರನ್ನು ಕೆಣಕ್ಕಿದರು. ಇದಾದ ಬಳಿಕ ಬಿರುಸಿನ ಬ್ಯಾಟಿಂಗ್ ನಡೆಸಿದ ಲಿಟನ್ ದಾಸ್ ನಸೀಮ್ ಶಾ ಬೌಲ್ ಮಾಡಿದ ಒಂದು ಓವರ್​ನಲ್ಲಿ 18 ರನ್ ಚಚ್ಚಿದರು. ಓವರ್​ನ ಮೊದಲ ಎಸೆತವನ್ನು ಬೌಂಡರಿಗಟ್ಟಿದ ದಾಸ್, ಮುಂದಿನ ಎಸೆತವನ್ನು ಮಿಡ್ ವಿಕೆಟ್ ಮೇಲೆ ಬೌಂಡರಿ ಬಾರಿಸಿದರು. ಮೂರನೇ ಚೆಂಡಿನಲ್ಲಿ ಯಾವುದೇ ರನ್ ಬರಲಿಲ್ಲ. ನಾಲ್ಕನೇಯಲ್ಲಿ, ಲಿಟನ್ ಮಿಡ್-ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರೆ, ಐದನೇ ಎಸೆತವನ್ನು ಸ್ಕ್ವೇರ್ ಲೆಗ್ ಮತ್ತು ಡೀಪ್ ಫೈನ್ ಲೆಗ್ ನಡುವೆ ಬೌಂಡರಿಗಟ್ಟಿದರು. ಕೊನೆಯ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಈ ಮೂಲಕ ಲಿಟನ್ ದಾಸ್, ನಸೀಮ್ ಶಾ ಅವರ ಓವರ್​ನಲ್ಲಿ18 ರನ್ ಗಳಿಸಿದರು.

Published on: Aug 23, 2024 10:31 PM