34 ಎಸೆತಗಳಲ್ಲಿ 37 ರನ್ ಬಾರಿಸಿದ ಬಾಬರ್: ಟಿ20 ಸರಣಿ ಗೆದ್ದ ಪಾಕಿಸ್ತಾನ್
Pakistan vs Sri Lanka: ಸುಲಭ ಗುರಿ ಹೊಂದಿದ್ದರೂ ಬಿರುಸಿನ ಬ್ಯಾಟಿಂಗ್ ನಡೆಸದೇ ಬಾಬರ್ ಆಝಂ ಬರೋಬ್ಬರಿ 34 ಎಸೆತಗಳನ್ನು ಎದುರಿಸಿ ಅಜೇಯ 37 ರನ್ ಬಾರಿಸಿದರು. ಪರಿಣಾಮ 115 ರನ್ಗಳ ಗುರಿ ತಲುಪಲು ಪಾಕಿಸ್ತಾನ್ ತಂಡ 18.4 ಓವರ್ಗಳನ್ನು ತೆಗೆದುಕೊಂಡಿತು. ಈ ಮೂಲಕ ಶ್ರೀಲಂಕಾ ತಂಡವನ್ನು 6 ವಿಕೆಟ್ಗಳಿಂದ ಸೋಲಿಸಿ ಪಾಕ್ ಪಡೆ ತ್ರಿಕೋನ ಸರಣಿ ಗೆದ್ದುಕೊಂಡಿದೆ.
ಶ್ರೀಲಂಕಾ, ಝಿಂಬಾಬ್ವೆ ವಿರುದ್ಧದ ತ್ರಿಕೋನ ಸರಣಿಯಲ್ಲಿ ಪಾಕಿಸ್ತಾನ್ ತಂಡ ಟ್ರೋಫಿ ಎತ್ತಿ ಹಿಡಿದಿದೆ. ಈ ಸರಣಿಯ ಫೈನಲ್ನಲ್ಲಿ ಪಾಕಿಸ್ತಾನ್ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು. ರಾವಲ್ಪಿಂಡಿಯಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು 19.1 ಓವರ್ಗಳಲ್ಲಿ ಕೇವಲ 114 ರನ್ಗಳಿಸಿ ಆಲೌಟ್ ಆಯಿತು. ಈ ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ್ ಮೊದಲ ವಿಕೆಟ್ಗೆ 46 ರನ್ ಪೇರಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಾಬರ್ ಆಝಂ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದರು.
ಅತ್ತ ಸುಲಭ ಗುರಿ ಹೊಂದಿದ್ದರೂ ಬಿರುಸಿನ ಬ್ಯಾಟಿಂಗ್ ನಡೆಸದೇ ಬಾಬರ್ ಆಝಂ ಬರೋಬ್ಬರಿ 34 ಎಸೆತಗಳನ್ನು ಎದುರಿಸಿ ಅಜೇಯ 37 ರನ್ ಬಾರಿಸಿದರು. ಪರಿಣಾಮ 115 ರನ್ಗಳ ಗುರಿ ತಲುಪಲು ಪಾಕಿಸ್ತಾನ್ ತಂಡ 18.4 ಓವರ್ಗಳನ್ನು ತೆಗೆದುಕೊಂಡಿತು. ಈ ಮೂಲಕ ಶ್ರೀಲಂಕಾ ತಂಡವನ್ನು 6 ವಿಕೆಟ್ಗಳಿಂದ ಸೋಲಿಸಿ ಪಾಕ್ ಪಡೆ ತ್ರಿಕೋನ ಸರಣಿ ಗೆದ್ದುಕೊಂಡಿದೆ.
