Loading video

ಬಳ್ಳಾರಿಗೆ ಶ್ರೀರಾಮುಲು ನಾಯಕತ್ವ ಬೇಕು, ಅವರು ಗ್ರಾಮೀಣ ಭಾಗದಲ್ಲಿ ಮುಂದುವರಿಯಲಿ: ಗಾಲಿ ಜನಾರ್ಧನ ರೆಡ್ಡಿ

|

Updated on: Jan 29, 2025 | 7:58 PM

ಬಳ್ಳಾರಿಯ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಅನಿಲ್ ಕುಮಾರ್ ಮೋಕಾ ಅವರನ್ನು ಮುಂದುವರಿಸಿರುವುದು ಹಬ್ಬದ ವಾತಾವರಣವನ್ನು ನಿರ್ಮಿಸಿದೆ, ಹಾಗಾಗಿ ಇವತ್ತಿನ ಶುಭ ಸಂದರ್ಭದಲ್ಲಿ ಬೇರೆ ಯಾವುದೇ ವಿಚಾರಗಳನ್ನು ಮಾತಾಡೋದು ಬೇಡ, ತನ್ನ ವಿರುದ್ಧ ಯಾವುದೇ ಆಪಾದನೆಗಳು ಬಂದರೂ ಸೈರಿಸಿಕೊಂಡು ಹೋಗುವ ಶಕ್ತಿ ವೈಯಕ್ತಿಕವಾಗಿ ತನ್ನಲ್ಲಿದೆ ಎಂದು ಜನಾರ್ಧನ ರೆಡ್ಡಿ ಹೇಳಿದರು.

ಬಳ್ಳಾರಿ: ಮಾಜಿ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಬಿ ಶ್ರೀರಾಮುಲು ಅವರ ಸಿಟ್ಟು ಇನ್ನೂ ತಣ್ಣಗಾಗಿಲ್ಲ ಮತ್ತು ಇವತ್ತು ಅವರು ಜಿಲ್ಲಾಧ್ಯಕ್ಷರ ಪ್ರಕ್ರಿಯೆಯಿಂದಲೂ ದೂರವುಳಿದರು. ಆದರೆ ಇದರಲ್ಲಿ ಭಾಗವಹಿಸಿದ್ದ ಗಾಲಿ ಜನಾರ್ಧನ ರೆಡ್ಡಿ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತಾಡುವಾಗ ತಮ್ಮ ಮತ್ತು ರಾಮುಲು ನಡುವೆ ಯಾವುದೇ ಅಸಮಾಧಾನ ಹಗೆತನ ಇಲ್ಲವೆಂಬಂತೆ ಮಾತಾಡಿದರು. ಜಿಲ್ಲೆಯ ಅಸಂಖ್ಯಾತ ಕಾರ್ಯಕರ್ತರಿಗೆ ರಾಮುಲು ಅವರ ನಾಯಕತ್ವ ಬೇಕು, ಒಂದು ಸೋಲು ಅವರಲ್ಲಿನ ನಾಯಕತ್ವದ ಗುಣಗಳನ್ನು ಕಡಿಮೆ ಮಾಡಲ್ಲ, ಬಳ್ಳಾರಿ ಗ್ರಾಮೀಣ ಭಾಗಕ್ಕೆ ಅವರೇ ಮುಂದುವರಿಯಲಿ ಎಂದು ರೆಡ್ಡಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬಳ್ಳಾರಿ ಬಿಜೆಪಿಯಲ್ಲಿ ಬಣಬಡಿದಾಟ ಶುರು: ಕುತೂಹಲ ಮೂಡಿಸಿದ ಶ್ರೀರಾಮುಲು ರಾಜಕೀಯ ನಡೆ

Published on: Jan 29, 2025 03:47 PM