AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ ಬಿಜೆಪಿಯಲ್ಲಿ ಬಣಬಡಿದಾಟ ಶುರು: ಕುತೂಹಲ ಮೂಡಿಸಿದ ಶ್ರೀರಾಮುಲು ರಾಜಕೀಯ ನಡೆ

ಹಳೇ ದೋಸ್ತಿಗಳಾದ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ನಡುವಿನ ಮುನಿಸು ಅದ್ಯಾಕೋ ತಣ್ಣಗೆ ಆಗುವ ಹಾಗೆ ಕಾಣಿಸುತ್ತಿಲ್ಲ. ಇಬ್ಬರು ಬಹಿರಂಗವಾಗಿ ವಾಗ್ಬಾದ ಮಾಡುವುದನ್ನ ಸದ್ಯಕ್ಕೆ ಸ್ಟಾಪ್ ಮಾಡಿದ್ದು, ಆದ್ರೆ ತಮ್ಮ ಆಕ್ರೋಶವನ್ನ ಬೆಂಬಲಿಗರಿಂದ ಹೊರಹಾಕಿಸುವ ಕೆಲಸ ಮಾಡುತ್ತಿದ್ದಾರೆ. ಇದರ ಮಧ್ಯೆ ಇಂದು ಬೆಂಗಳೂರಿಗೆ ತೆರಳಿದ್ದ ಶ್ರೀರಾಮುಲು ಬಿಜೆಪಿ ವರಿಷ್ಠರನ್ನ ಭೇಟಿ ಮಾಡದೆ ಬಳ್ಳಾರಿಗೆ ವಾಪಸ್ ಮರಳಿದ್ದು ಸಾಕಷ್ಟು ಚರ್ಚೆಗೆ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.

ಬಳ್ಳಾರಿ ಬಿಜೆಪಿಯಲ್ಲಿ ಬಣಬಡಿದಾಟ ಶುರು: ಕುತೂಹಲ ಮೂಡಿಸಿದ ಶ್ರೀರಾಮುಲು ರಾಜಕೀಯ ನಡೆ
Sriramulu vs Janardhan Reddy
ವಿನಾಯಕ ಬಡಿಗೇರ್​
| Edited By: |

Updated on: Jan 28, 2025 | 10:09 PM

Share

ಬಳ್ಳಾರಿ, (ಜನವರಿ 28): ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ನಡುವಿನ ಕುಸ್ತಿ ಶುರುವಾದ ಬೆನ್ನಲ್ಲೇ ಗಣಿನಾಡು ಬಳ್ಳಾರಿಯಲ್ಲಿ ಬಿಜೆಪಿ ಬಣ ಬಡೆದಾಟ ಜೋರಾಗಿದೆ. ಜನಾರ್ದನ ರೆಡ್ಡಿ ಬಣ ಒಂದು ಕಡೆಯಾದ್ರೆ, ಇತ್ತ ಶ್ರೀರಾಮುಲು ಬಣ ಮತ್ತೊಂದು ಕಡೆ. ನಮ್ಮ ನಾಯಕರೇ ಹೆಚ್ಚು ಎಂದು ಇವರಂದ್ರೆ, ನಮ್ಮ ನಾಯಕರು ಯಾರಿಗೂ ಕಮ್ಮಿ ಇಲ್ಲ ಎಂದು ಅಂತಾ ಇನ್ನೊಂದು ಬಣ ಹೇಳುತ್ತಿದೆ. ಹೀಗಾಗಿ ಬಳ್ಳಾರಿ ಬಿಜೆಪಿ ಮನೆಯೂ ಸಂಪೂರ್ಣ ಗೊಂದಲ ಮಯವಾಗಿದೆ. ಮೊದಲೇ ಜಿಲ್ಲೆಯಲ್ಲಿ ಬಿಜೆಪಿ ಧೂಳೀಪಟವಾಗಿದ್ದು, ಇದರ ಮಧ್ಯ ಇದೀಗ ಬಣಬಡಿದಾಟ ಶುರುವಾಗಿರುವುದು ರಾಜ್ಯ ನಾಯಕರಿಗೆ ತಲೆನೋವಾಗಿದೆ.

ಬಳ್ಳಾರಿ ಬಿಜೆಪಿಯಲ್ಲಿ ಶುರುವಾಯ್ತು ಬಣಬಡಿದಾಟ

ಕಳೆದ ವಾರದಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿಯಲ್ಲಿ, ಸಂಡೂರ ಉಪಚುನಾವಣೆಯ ಬಿಜೆಪಿ ಸೋಲಿಗೆ ಶ್ರೀರಾಮುಲುನೇ ಕಾರಣ ಎಂದು ಹೇಳಲಾಗಿತ್ತು.. ಜೊತೆಗೆ ಶ್ರೀರಾಮುಲು ಅವರ ರಾಜಕೀಯ ಶಕ್ತಿ ಕುಂದಿದೆ ಎಂದು ಬಿಂಬಿಸಲಾಗಿತ್ತು.. ಹೀಗಾಗಿ ಇದರಿಂದ ರೊಚ್ಚಿಗೆದ್ದಿದ್ದ ಶ್ರೀರಾಮುಲು ನನ್ನ ಬಗ್ಗೆ ಜನಾರ್ದನ ರೆಡ್ಡಿ ಆ್ಯಂಡ ಟೀಮ್ ಉಸ್ತುವಾರಿ ರಾಧಾ ಮೋಹನ್ ಅಗರವಾಲ್‌ಗೆ ಕಿವಿ ಚುಚ್ಚಿದ್ದಾರೆ. ಹೀಗಾಗಿ ನನಗೆ ಅಪಮಾನ ಮಾಡುವ ಕೆಲಸ ನಡೆಯಿತು ಎಂದು ಶ್ರೀರಾಮುಲು ಬಹಿರಂಗವಾಗಿಯೇ ತಮ್ಮ ಅಸಮಧಾನ ಹೊರ ಹಾಕಿದ್ರು. ಇದಾದ ಬಳಿಕ ರೆಡ್ಡಿ ಪ್ರೆಸ್ ಮೀಟ್ ಮಾಡಿ, ಶ್ರೀರಾಮುಲನ್ನ ಬೆಳೆಸಿದ್ದೆ ನಾನು, ಆದ್ರೆ ಇದೀಗ ನನ್ನ ವಿರುದ್ಧವೇ ತಿರುಗಿ ಬಿದ್ದಿದ್ದಾನೆ ಎಂದು ಟಾಂಗ್ ಕೊಟ್ಟಿದ್ದರು. ರೆಡ್ಡಿ ಪ್ರೆಸ್ ಮೀಟ್ ಬಳಿಕ ಇತ್ತ ಶ್ರೀರಾಮುಲು ಕೂಡ ಪ್ರೇಸ್ ಮೀಟ್ ಮಾಡಿ, ಯಾರಿಂದಲೂ ಯಾರು ಬೆಳೆಯುದಕ್ಕೆ ಆಗಲ್ಲಎಂದು ಒಬ್ಬರಿಗೊಬ್ಬರು ಏಕವಚನದಲ್ಲೇ ತಿರುಗೇಟು ನಿಡಿದ್ದರು. ಆ ಇಬ್ಬರ ನಾಯಕ ಕಿತ್ತಾಟದಿಂದ ಬಳ್ಳಾರಿ ಬಿಜೆಪಿ ಕಾರ್ಯಕರ್ತರಲ್ಲಿ ಎರಡು ಬಣಗಳಾಗಿ ಒಡೆದಿವೆ. ಇಂದು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಪ್ರೆಸ್ ಮೀಟ್ ಮಾಡಿದ್ರೆ ಅದಕ್ಕೂ ಬಿಜೆಪಿ ಸಂಬಂಧವಿಲ್ಲ ಎಂದು ಇನ್ನೊಂದು ಬಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದೆ. ಹೀಗಾಗಿ ರೆಡ್ಡಿ ಬೆಂಬಲಿತ ಬಿಜೆಪಿ ಕಾರ್ಯಕರ್ತರು ರೊಚ್ಚಿಗೆದ್ದಾರೆ.

ಇದನ್ನೂ ಒದಿ: ಶ್ರೀರಾಮುಲು, ಜನಾರ್ದನ ರೆಡ್ಡಿ ಸಮರ ನಿಯಂತ್ರಣಕ್ಕೆ ಬಿಜೆಪಿ ಹೈಕಮಾಂಡ್ ಎಂಟ್ರಿ: ವಿಜಯೇಂದ್ರಗೆ ಬಂತು ಖಡಕ್ ಸೂಚನೆ

ಇನ್ನೂ ಕೋರ್ ಕಮಿಟಿಯಲ್ಲಾದ ಅಪಮಾನದ ಬಗ್ಗೆ ಬಹಿರಂಗವಾಗಿ ಅಸಮಧಾನ ಹೊರ ಹಾಕಿದ್ದ ರಾಮುಲು, ಪಕ್ಷ ಬಿಡುವ ಮಟ್ಟಿಗೆ ಮಾತನಾಡಿದ್ರು. ಹೀಗಾಗಿ ಈ ಅಸಮಧಾನವನ್ನ ಸರಿದೂಗಿಸಬೇಕು ಎಂದು ಬಿಜೆಪಿ ಹೈಕಮಾಂಡ್ ಪ್ರಯತ್ನ ಮಾಡುತ್ತಲೇ ಇದೆ. ಕಳೆದ ಮೂರು ನಾಲ್ಕು ದಿನಗಳ ಹಿಂದೆ ಶ್ರೀರಾಮುಲುಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪೋನ್ ಕರೆ ಯಾವುದೇ ಕಾರಣಕ್ಕೂ ಅವಸರದ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಸಮಧಾನ ಪಡೆಸುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಸ್ವಲ್ಪ ತಾಳ್ಮೆ ತೆಗೆದುಕೊಂಡಿರುವ ರಾಮುಲು ಮೌನಕ್ಕೆ ಜಾರಿದ್ದಾರೆ. ಆದ್ರೆ ತಮ್ಮಲ್ಲಿರುವ ಆಕ್ರೋಶವನ್ನ ತಮ್ಮ ಬೆಂಬಲಿಗರ ಮೂಲಕ ಹೊರ ಹಾಕುವ ಕೆಲಸ ಮಾಡುತ್ತಿದ್ದಾರೆ.

ಕುತೂಹಲಕ್ಕೆ ಕಾರಣವಾದ ಶ್ರೀರಾಮುಲು ನಡೆ

ಇನ್ನು ಇಂದು ಬೆಂಗಳೂರಿಗೆ ತೆರಳಿದ್ದ ರಾಮುಲು ಬಿಜೆಪಿ ಪಕ್ಷದ ವರಿಷ್ಠರನ್ನ ಭೇಟಿ ಮಾಡಿ ಆಗಿರುವ ಬೆಳವಣಿಗೆ ಬಗ್ಗೆ ಚರ್ಚೆ ಮಾಡುವ ಮನಸ್ಥಿತಿಯಲ್ಲಿದ್ರು.. ಆದ್ರೆ ಅದ್ಯಾಕೋ ಏನೋ ಯಾವ ವರಿಷ್ಠರನ್ನ ಭೇಟಿ ಮಾಡದೆ ಬಳ್ಳಾರಿಗೆ ವಾಪಸ್​ ಮರಳಿದ್ದಾರೆ. ಹೀಗಾಗಿ ಶ್ರೀರಾಮುಲುರ ಈ ನಡೆ ಸಾಕಷ್ಟು ಚರ್ಚೆಗೆ ಹಾಗೂ ಕುತೂಹಲಕ್ಕೂ ಕಾರಣವಾಗಿದೆ.

ಸದ್ಯಕ್ಕೆ ಇಬ್ಬರು ನಾಯಕರು ತಮ್ಮ ಆಕ್ರೋಶವನ್ನ ಕಾರ್ಯಕರ್ತರ ಮೂಲಕ ಹೊರ ಹಾಕಿಸುತ್ತಿದ್ದು. ಇದು ಎಲ್ಲಿಗೆ ಹೋಗಿ ನಿಲ್ಲುತ್ತೆ ಎಂಬುದನ್ನ ಕಾದು ನೋಡಬೇಕಿದೆ. ಇನ್ನು ವಿಜಯನಗರ ಹೊಸಪೇಟೆಯಲ್ಲಿ ರೆಡ್ಡಿ ವಿರುದ್ಧ ವಾಲ್ಮೀಕಿ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿ ಟೈಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಬಳ್ಳಾರಿ ಬಿಜೆಪಿ ಮನೆ ಒಡೆದು ಎರಡು ಹೋಳಾಗಿದ್ದು, ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ. ರೆಡ್ಡಿ ಬಣ ಒಂದು ಕಡೆಯಾದ್ರೆ, ಶ್ರೀರಾಮುಲು ಬಣ ಮತ್ತೊಂದು ಕಡೆ ಜೋರಾಗಿದೆ. ಸದ್ಯಕ್ಕೆ ಬಳ್ಳಾರಿ ಗ್ರಾಮೀಣ ಕ್ಷೇತ್ರದ ರೆಡ್ಡಿ ಬೆಂಬಲಿಗರು ಪ್ರೆಸ್ ಮೀಟ್ ಮಾಡಿ ರಾಮುಲು ಕ್ಷೇತ್ರ ಬಿಟ್ಟು ಹೋಗೋದಾದ್ರೆ ಹೋಗಲಿ ಆದ್ರೆ ಮುಂದಿನ ನಾಯಕ ಯಾರು ಅನ್ನೊದನ್ನ ಹೈಕಮಾಂಡ್ ತಿಳಸಲಿ ಎಂದು ಪಟ್ಟು ಹಿಡಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು