Video: ಊಟದ ಬೆಲೆ ವಿಚಾರವಾಗಿ ರೈಲಿನಲ್ಲಿ ಜಗಳ, ಪ್ರಯಾಣಿಕನಿಗೆ ದೊಣ್ಣೆಯಿಂದ ಹೊಡೆದ ಕೇಟರಿಂಗ್ ಸಿಬ್ಬಂದಿ
ಅಂಡಮಾನ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಕರೊಬ್ಬರು ಊಟದ ಬೆಲೆಯನ್ನು ಪ್ರಶ್ನಿಸಿದ್ದಕ್ಕೆ ಅಡುಗೆ ಸಿಬ್ಬಂದಿ ಅವರ ಮೇಲೆ ದೊಣ್ಣೆಯಿಂದ ಹಿಗ್ಗಾಮುಗ್ಗ ಥಳಿಸಿರುವ ಘಟನೆ ವರದಿಯಾಗಿದೆ. ಝಾನ್ಸಿಯಲ್ಲಿ ಈ ಘಟನೆ ನಡೆದಿದೆ. ನಿಹಾಲ್ ಎಂದು ಗುರುತಿಸಲಾದ ಪ್ರಯಾಣಿಕನು ಅಂಡಮಾನ್ ಎಕ್ಸ್‌ಪ್ರೆಸ್‌ನಲ್ಲಿ ಸಸ್ಯಾಹಾರಿ ಊಟಕ್ಕೆ 130 ರೂ. ಶುಲ್ಕ ವಿಧಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು, ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಝಾನ್ಸಿ, ನವೆಂಬರ್ 06: ಅಂಡಮಾನ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಕರೊಬ್ಬರು ಊಟದ ಬೆಲೆಯನ್ನು ಪ್ರಶ್ನಿಸಿದ್ದಕ್ಕೆ ಅಡುಗೆ ಸಿಬ್ಬಂದಿ ಅವರ ಮೇಲೆ ದೊಣ್ಣೆಯಿಂದ ಹಿಗ್ಗಾಮುಗ್ಗ ಥಳಿಸಿರುವ ಘಟನೆ ವರದಿಯಾಗಿದೆ. ಝಾನ್ಸಿಯಲ್ಲಿ ಈ ಘಟನೆ ನಡೆದಿದೆ. ನಿಹಾಲ್ ಎಂದು ಗುರುತಿಸಲಾದ ಪ್ರಯಾಣಿಕನು ಅಂಡಮಾನ್ ಎಕ್ಸ್‌ಪ್ರೆಸ್‌ನಲ್ಲಿ ಸಸ್ಯಾಹಾರಿ ಊಟಕ್ಕೆ 130 ರೂ. ಶುಲ್ಕ ವಿಧಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು, ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ವಿಡಿಯೋದಲ್ಲಿ, ಅಡುಗೆ ಸಿಬ್ಬಂದಿ ಎಂದು ಹೇಳಲಾಗುವ ಪುರುಷರು, ಕಂಪಾರ್ಟ್‌ಮೆಂಟ್‌ನೊಳಗೆ ಪ್ರಯಾಣಿಕನನ್ನು ಕೋಲುಗಳು ಮತ್ತು ಬೆಲ್ಟ್‌ಗಳಿಂದ ಹೊಡೆಯುವುದನ್ನು ಕಾಣಬಹುದು, ಇತರ ಪ್ರಯಾಣಿಕರು ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಊಟದ ಪ್ಯಾಕೆಟ್ ಮೇಲೆ 110 ರೂ. ಇತ್ತು ಆದರೆ 130ರೂ,ಗೆ ಮಾರಾಟ ಮಾಡಲಾಗಿತ್ತು, ಅದನ್ನು ಪ್ರಶ್ನಿಸಿದ್ದಕ್ಕೆ ಜಗಳ ಶುರುವಾಗಿತ್ತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ