ಚಿಕ್ಕಮಗಳೂರು: ಡಿಪೋ ಮ್ಯಾನೇಜರ್ ಒತ್ತಡಕ್ಕೆ ಕೆಟ್ಟು ಹೋದ ಬಸ್ ಚಾಲನೆ! ಚಾಲಕನ ವಿರುದ್ಧ ಪ್ರಯಾಣಿಕರ ಆಕ್ರೋಶ

Edited By:

Updated on: Jan 18, 2024 | 2:18 PM

ಡಕೋಟ ಕೆಎಸ್​ಆರ್​ಟಿಸಿ ಬಸ್​ಗಳನ್ನು ರಸ್ತೆಗಿಳಿಸುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಇದರಿಂದ ಅವಾಂತಗಳು ಸೃಷ್ಟಿಯಾಗುತ್ತಿವೆ. ಹೀಗಿದ್ದರೂ ಡಿಪ್ಪೋ ಮ್ಯಾನೇಜರ್ ಒತ್ತಡಕ್ಕೆ ಮಣಿದ ಚಾಲಕರೊಬ್ಬರು ಗೇರ್ ಸಮಸ್ಯೆ ಇದ್ದರೂ ಪ್ರಯಾಣಿಕರನ್ನು ಹತ್ತಿಸಿ ಬಸ್ ಚಾಲನೆ ಮಾಡಿದ ಪ್ರಕರಣ ಚಿಕ್ಕಮಗಳೂರಿನಲ್ಲಿ ನಡೆದಿದೆ. ವಿಚಾರ ತಿಳಿದ ಪ್ರಯಾಣಿಕರು ಚಾಲಕನನ್ನು ತರಾಟೆಗೆ ತೆಗದುಕೊಂಡಿದ್ದಾರೆ.

ಚಿಕ್ಕಮಗಳೂರು, ಜ.18: ಡಕೋಟ ಕೆಎಸ್​ಆರ್​ಟಿಸಿ (KSRTC) ಬಸ್​ಗಳನ್ನು ರಸ್ತೆಗಿಳಿಸುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಇದರಿಂದ ಅವಾಂತಗಳು ಸೃಷ್ಟಿಯಾಗುತ್ತಿವೆ. ಹೀಗಿದ್ದರೂ ಡಿಪ್ಪೋ ಮ್ಯಾನೇಜರ್ ಒತ್ತಡಕ್ಕೆ ಮಣಿದ ಚಾಲಕರೊಬ್ಬರು ಗೇರ್ ಸಮಸ್ಯೆ ಇದ್ದರೂ ಪ್ರಯಾಣಿಕರನ್ನು ಹತ್ತಿಸಿ ಬಸ್ ಚಾಲನೆ ಮಾಡಿದ ಪ್ರಕರಣ ಚಿಕ್ಕಮಗಳೂರಿನಲ್ಲಿ (Chikkamagaluru) ನಡೆದಿದೆ. ವಿಚಾರ ತಿಳಿದ ಪ್ರಯಾಣಿಕರು ಚಾಲಕನನ್ನು ತರಾಟೆಗೆ ತೆಗದುಕೊಂಡಿದ್ದಾರೆ. ಕಡೂರಿನಿಂದ ಚಿಕ್ಕಮಗಳೂರಿಗೆ ಪ್ರಯಾಣ ಬೆಳೆಸಿದ ಬಸ್ ರಸ್ತೆ ಮಧ್ಯೆ ಕೆಟ್ಟು ಹೋಗಿದೆ. ಗೇರ್ ಬೀಳದಿದ್ದರೂ 80 ಪ್ರಯಾಣಿಕರನ್ನು ಹಾಕಿ ಬಸ್ ಚಾಲನೆ ಮಾಡಲಾಗಿದೆ. ಪ್ರಯಾಣಿಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಹಿನ್ನೆಲೆ ಬಸ್ ನಿಲ್ಲಿಸಿ ಬೇರೊಂದು ಬಸ್​ಗೆ ಪ್ರಯಾಣಿಕರನ್ನು ಸ್ಥಳಾಂತರಿಸಿದ್ದಾರೆ. ಬಳಿಕ ಚಾಲಕ ಆ ಬಸ್​ ಅನ್ನು ಕಡೂರು ಬಸ್​ ನಿಲ್ದಾಣಕ್ಕೆ ಕೊಂಡೊಯ್ದಿದ್ದಾರೆ. ಕಡೂರು ಕೆಎಸ್​ಆರ್​ಟಿಸಿ ಅಧಿಕಾರಿಗಳ ನಿರ್ಲಕ್ಷಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow Us
Ashwith Mavinaguni

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More