ಉಡುಪಿಗೆ ಬಂದ ಪವನ್ ಕಲ್ಯಾಣ್ ‘ಕಾಂತಾರ’ ಬಗ್ಗೆ ಹೇಳಿದ್ದೇನು?

Updated on: Dec 07, 2025 | 7:23 PM

Pawan Kalyan: ಆಂಧ್ರ ಪ್ರದೇಶ ಡಿಸಿಎಂ, ನಟ ಪವನ್ ಕಲ್ಯಾಣ್ ಅವರು ಉಡುಪಿಗೆ ಬಂದಿದ್ದಾರೆ. ಮಾಧ್ಯಮದವರೊಟ್ಟಿಗೆ ಮಾತನಾಡಿದ ನಟ ಪವನ್ ಕಲ್ಯಾಣ್, ಕೃಷ್ಣಮಠದಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ಕೊಂಡಾಡಿದರು. ಬಳಿಕ ಕನ್ನಡದ ಸೂಪರ್ ಹಿಟ್ ಸಿನಿಮಾ ‘ಕಾಂತಾರ’ದ ಬಗ್ಗೆಯೂ ಸಹ ಪವನ್ ಕಲ್ಯಾಣ್ ಮಾತನಾಡಿದ್ದು, ಅದೊಂದು ಬಹಳ ಒಳ್ಳೆಯ ಸಿನಿಮಾ, ಮೊದಲ ಭಾಗವನ್ನು ನಾನು ನೋಡಿದ್ದೇನೆ, ಎರಡನೇ ಭಾಗ ಇನ್ನೂ ನೋಡಿಲ್ಲ, ನೋಡುವೆ’ ಎಂದಿದ್ದಾರೆ.

ಆಂಧ್ರ ಪ್ರದೇಶ ಡಿಸಿಎಂ, ನಟ ಪವನ್ ಕಲ್ಯಾಣ್ (Pawan Kalyan) ಅವರು ಉಡುಪಿಗೆ ಬಂದಿದ್ದಾರೆ. ಕೃಷ್ಣಮಠದಲ್ಲಿ ವಿಶೇಷ ಪೂಜೆ ಹಾಗೂ ಗೀತೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಭಾಗಿ ಆಗಿದ್ದಾರೆ. ಈ ವೇಳೆ ಮಾಧ್ಯಮದವರೊಟ್ಟಿಗೆ ಮಾತನಾಡಿದ ನಟ ಪವನ್ ಕಲ್ಯಾಣ್, ಕೃಷ್ಣಮಠದಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ಕೊಂಡಾಡಿದರು. ಬಳಿಕ ಕನ್ನಡದ ಸೂಪರ್ ಹಿಟ್ ಸಿನಿಮಾ ‘ಕಾಂತಾರ’ದ ಬಗ್ಗೆಯೂ ಸಹ ಪವನ್ ಕಲ್ಯಾಣ್ ಮಾತನಾಡಿದ್ದು, ಅದೊಂದು ಬಹಳ ಒಳ್ಳೆಯ ಸಿನಿಮಾ, ಮೊದಲ ಭಾಗವನ್ನು ನಾನು ನೋಡಿದ್ದೇನೆ, ಎರಡನೇ ಭಾಗ ಇನ್ನೂ ನೋಡಿಲ್ಲ, ನೋಡುವೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More