ಗ್ರೀನ್ ಹೋಗಿ ಪಿಂಕಾದ ಪಾಕ್ ಜೆರ್ಸಿ: ಕಾರಣವೇನು ಗೊತ್ತಾ?

Updated on: Oct 28, 2025 | 10:53 AM

Pakistan vs South Africa: ಫಿಂಕ್​ ಅಕ್ಟೋಬರ್ ಅಭಿಯಾನದ ಭಾಗವಾಗಿ, ಆತಿಥೇಯ ತಂಡವು ವಿಶೇಷವಾಗಿ ವಿನ್ಯಾಸಗೊಳಿಸಲಾದ ಗುಲಾಬಿ ಬಣ್ಣದ ಜೆರ್ಸಿಗಳನ್ನು ಧರಿಸಲಿದ್ದು, ಸೌತ್ ಆಫ್ರಿಕಾದ ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳು ಗುಲಾಬಿ ಬಣ್ಣದ ರಿಬ್ಬನ್‌ಗಳನ್ನು ಧರಿಸಲಿದ್ದಾರೆ ಎಂದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತಿಳಿಸಿದೆ.

ಪಾಕಿಸ್ತಾನ್ ಮತ್ತು ಸೌತ್ ಆಫ್ರಿಕಾ ನಡುವಣ ಟಿ20 ಸರಣಿಯು ಇಂದಿನಿಂದ (ಅ.28) ಶುರುವಾಗಲಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್​ನಲ್ಲಿ ಪಾಕಿಸ್ತಾನ್ ತಂಡವು ಪಿಂಕ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಸಾಮಾನ್ಯವಾಗಿ ಗ್ರೀನ್ ಜೆರ್ಸಿ ಧರಿಸುವ ಪಾಕ್ ಪಡೆ ಈ ಬಾರಿ ಗುಲಾಬಿ ಬಣ್ಣದೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಪಾಕಿಸ್ತಾನ್ ತಂಡವು ತನ್ನ ಜೆರ್ಸಿ ಬಣ್ಣ ಬದಲಿಸಲು ಮುಖ್ಯ ಕಾರಣ #PINKtober ಅಭಿಯಾನ. ಅಂದರೆ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪಾಕಿಸ್ತಾನ್ ಆಟಗಾರರು ಪಿಂಕ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ.

#PINKtober ಅಭಿಯಾನದ ಭಾಗವಾಗಿ, ಆತಿಥೇಯ ತಂಡವು ವಿಶೇಷವಾಗಿ ವಿನ್ಯಾಸಗೊಳಿಸಲಾದ ಗುಲಾಬಿ ಬಣ್ಣದ ಜೆರ್ಸಿಗಳನ್ನು ಧರಿಸಲಿದ್ದು, ಸೌತ್ ಆಫ್ರಿಕಾದ ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳು ಗುಲಾಬಿ ಬಣ್ಣದ ರಿಬ್ಬನ್‌ಗಳನ್ನು ಧರಿಸಲಿದ್ದಾರೆ ಎಂದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತಿಳಿಸಿದೆ.

ಪಾಕಿಸ್ತಾನ್ ಟಿ20 ತಂಡ: ಸೈಮ್ ಅಯ್ಯೂಬ್, ಸಾಹಿಬ್​ಝಾದ ಫರ್ಹಾನ್ (ವಿಕೆಟ್ ಕೀಪರ್), ಬಾಬರ್ ಆಝಂ, ಹಸನ್ ನವಾಝ್, ಸಲ್ಮಾನ್ ಅಲಿ ಅಘಾ (ನಾಯಕ), ಮೊಹಮ್ಮದ್ ನವಾಝ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಮೊಹಮ್ಮದ್ ವಾಸಿಂ ಜೂನಿಯರ್, ಅಬ್ರಾರ್ ಅಹ್ಮದ್, ಸಲ್ಮಾನ್ ಮಿರ್ಝಾ, ಉಸ್ಮಾನ್ ಖಾನ್, ಉಸ್ಮಾನ್ ತಾರಿಖ್, ಅಬ್ದುಲ್ ಸಮದ್.

ಸೌತ್ ಆಫ್ರಿಕಾ ಟಿ20 ತಂಡ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಝ ಹೆಂಡ್ರಿಕ್ಸ್, ಲುವಾನ್-ಡ್ರೆ ಪ್ರಿಟೋರಿಯಸ್, ಡೆವಾಲ್ಡ್ ಬ್ರೆವಿಸ್, ಡೊನೊವನ್ ಫೆರೀರಾ (ನಾಯಕ), ಜಾರ್ಜ್ ಲಿಂಡೆ, ಕಾರ್ಬಿನ್ ಬಾಷ್, ನ್ಕಾಬಯೋಮ್ಜಿ ಪೀಟರ್, ಲುಂಗಿ ಎನ್‌ಗಿಡಿ, ನಾಂಡ್ರೆ ಬರ್ಗರ್, ಲಿಝಾಡ್ ವಿಲಿಯಮ್ಸ್, ಟೋನಿ ಡಿ ಝೋರ್ಝಿ, ಮ್ಯಾಥ್ಯೂ ಬ್ರೀಟ್ಝ್​ಕೆ, ಒಟ್ಟಿನಿಲ್ ಬ್ರಾಟ್​ಮನ್, ಆ್ಯಂಡಿಲೆ ಸಿಮಿಲೇನ್.