Tanisha Kuppanda: ನಟಿಗೆ ಅಸಭ್ಯವಾಗಿ ಪ್ರಶ್ನೆ ಕೇಳಿದ್ದು ಪ್ರಚಾರದ ತಂತ್ರವೇ? ಉತ್ತರ ನೀಡಿದ ‘ಪೆಂಟಗನ್​’ ಚಿತ್ರತಂಡ

Updated on: Apr 04, 2023 | 3:48 PM

Pentagon Movie Controversy: ನಟಿ ತನಿಷಾ ಕುಪ್ಪಂಡ ಅವರಿಗೆ ಒಬ್ಬ ಯೂಟ್ಯೂಬರ್​ ಅಸಭ್ಯವಾಗಿ ಪ್ರಶ್ನೆ ಕೇಳಿದ್ದು ದೊಡ್ಡ ಸುದ್ದಿ ಆಯಿತು. ಇದು ಪ್ರಚಾರದ ಗಿಮಿಕ್​ ಆಗಿರಬಹುದೇ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಯಾವುದೇ ಸಿನಿಮಾ ಬಿಡುಗಡೆಗೆ ಹತ್ತಿರವಾದಾಗ ಆ ತಂಡ ಏನಾದರೂ ಕಿರಿಕ್​ ಮಾಡಿಕೊಂಡರೆ ಅದು ಪ್ರಚಾರದ ಗಿಮಿಕ್​ ಇರಬಹುದು ಅಂತ ಅನುಮಾನ ಮೂಡುತ್ತದೆ. ಇತ್ತೀಚೆಗೆ ಪೆಂಟಗನ್​’ (Pentagon Movie) ಚಿತ್ರದ ನಟಿ ತನಿಷಾ ಕುಪ್ಪಂಡ (Tanisha Kuppanda) ಅವರಿಗೆ ಒಬ್ಬ ಯೂಟ್ಯೂಬರ್​ ಅಸಭ್ಯವಾಗಿ ಪ್ರಶ್ನೆ ಕೇಳಿದ್ದು ದೊಡ್ಡ ಸುದ್ದಿ ಆಯಿತು. ಇದು ಕೂಡ ಪ್ರಚಾರದ ಗಿಮಿಕ್​ ಆಗಿರಬಹುದೇ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಆ ಕುರಿತು ಸುದ್ದಿಗೋಷ್ಠಿ ಮೂಲಕ ‘ಪೆಂಟಗನ್​’ ಚಿತ್ರತಂಡ ಉತ್ತರ ನೀಡಿದೆ. ‘ದೇವರಾಣೆಗೂ ನಾವು ಇದನ್ನು ಪಬ್ಲಿಸಿಟಿಗಾಗಿ ಮಾಡಿಲ್ಲ. ಅವನೊಬ್ಬ ಅಯೋಗ್ಯ. ಅಂಥ ಪ್ರಶ್ನೆ ಕೇಳಿದ. ಹಾಗಾಗಿ ತರಾಟೆಗೆ ತೆಗೆದುಕೊಂಡೆವು’ ಎಂದು ನಿರ್ದೇಶಕ ರಾಘು ಶಿವಮೊಗ್ಗ (Raghu Shivamogga) ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Apr 04, 2023 03:48 PM
Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More