ಉತ್ತರ ಕುಮಾರ ಯಾರು ಅಂತ ಜನ ಈಗಾಗಲೇ ನಿರ್ಧರಿಸಿದ್ದಾರೆ, ನಾನು ನಾಪತ್ತೆಯಾಗಿಲ್ಲ: ಶಿವಾನಂದ ಪಾಟೀಲ್

ಅರುಣ್​ ಕುಮಾರ್​ ಬೆಳ್ಳಿ

Updated on: May 06, 2025 | 1:26 PM

ತಾನು ಸಲ್ಲಿಸಿರುವ ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲವಾದರೆ, ಸಹಿ ಮಾಡಿದ ಲೆಟರ್ ಹೆಡ್ ಅನ್ನು ಬ್ಲ್ಯಾಂಕ್ ಆಗಿ ಅವರಿಗೆ ಕೊಡುತ್ತೇನೆ, ಏನು ಮತ್ತು ಹೇಗೆ ಬರೆಯಬೇಕು ಅಂತ ಅವರು ನಿರ್ಧರಿಸಲಿ, ತನ್ನ ಪತ್ರದೊಂದಿಗೆ ಯತ್ನಾಳ್ ಸಹ ರಾಜೀನಾಮೆ ಸಲ್ಲಿಸಬೇಕು, ವಿಧಾನಸಭಾಧ್ಯಕ್ಷರು ಮೊದಲು ತನ್ನ ರಾಜೀನಾಮೆ ಪತ್ರ ಅಂಗೀಕರಿಸಿದ ಬಳಿಕ ಅವರ ಪತ್ರವನ್ನು ಅಂಗೀಕರಿಸಲಿ ಎಂದು ಶಿವಾನಂದ ಪಾಟೀಲ್ ಹೇಳಿದರು.

ವಿಜಯಪುರ, ಮೇ 6: ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಬಸವನ ಬಾಗೇವಾಡಿಯ ಶಿವಾನಂದ ಪಾಟೀಲ್ ಅವರ ನಿರ್ಧಾರ ಅಚಲರಾಗಿರುವಂತಿದೆ. ನಮ್ಮ ವಿಜಯಪುರ ವರದಿಗಾರನೊಂದಿಗೆ ಮಾತಾಡಿರುವ ಅವರು ಬಸನಗೌಡ ಪಾಟೀಲ್  ಯತ್ನಾಳ್ (Basangouda Patil Yatnal) ಅವರ ಟ್ವೀಟ್​ಗೆ ಉತ್ತರಿಸುತ್ತ, ಉತ್ತರ ಕುಮಾರ ಯಾರು ಅನ್ನೋದು ರಾಜ್ಯದ ಜನಕ್ಕೆ ಗೊತ್ತಾಗಿದೆ, ಅದನ್ನು ನಿರ್ಣಯಿಸಿದವನು ನಾನಲ್ಲ, ಜನ ನಿರ್ಣಯಿಸಿದ್ದಾರೆ, ರಾಜೀನಾಮೆ ಸಲ್ಲಿಸಿದಂದಿನಿಂದ ತಾನೇನೂ ಸಾರ್ವಜನಿಕ ಬದುಕಿನಿಂದ ದೂರ ಹೋಗಿಲ್ಲ ಅವರ ನಡುವೆಯೇ ಇದ್ದೇನೆ ಎಂದು ಹೇಳಿದರು. ತನ್ನ ಸವಾಲನ್ನು ಯತ್ನಾಳ್ ಹೇಗೆ ಸ್ವೀಕರಿಸುತ್ತಾರೆ ಅನ್ನೋದು ಅವರಿಗೆ ಬಿಟ್ಟಿದ್ದು ಎಂದು ಅವರು ಹೇಳಿದರು.

ಇದನ್ನೂ ಓದಿ:  ನನ್ನ ತಂದೆಯ ಸವಾಲನ್ನು ಯತ್ನಾಳ್ ಸ್ವೀಕರಿಸಲಿಲ್ಲವೆಂದು ನನ್ನ ಮಕ್ಕಳಿಗೆ ಹೇಳುತ್ತೇನೆ: ಶಿವಾನಂದ ಪಾಟೀಲ್ ಮಗ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.