Pancharatna Yatra in Koppal: ಮತ್ತೊಮ್ಮೆ ಪಕ್ಷ ವಿಸರ್ಜಿಸುವ ಮಾತಾಡಿ ಜನರಲ್ಲಿ ಗೊಂದಲ ಮೂಡಿಸಿದ ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ

Updated on: Jan 30, 2023 | 6:16 PM

ಅವರು ಹತಾಷೆಯಲ್ಲಿ ಪಕ್ಷವನ್ನು ವಿಸರ್ಜಿಸಿದರೆ ರಾಜ್ಯದ ಬಡ ಜನತೆಗೆ ಅಗುವ ಲಾಭ ನಷ್ಟವಾದರೂ ಏನು? ಕುಮಾರಸ್ವಾಮಿಯೇ ಹೇಳಬೇಕು.

ಕೊಪ್ಳಳ: ಪಂಚರತ್ನ ಯಾತ್ರೆ ಕೊಪ್ಪಳ ಜಿಲ್ಲೆಯನ್ನು ಪ್ರವೇಶಿಸಿದೆ ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ನೇತೃತ್ವದ ಯಾತ್ರೆ ತಾವರೆಗೆರೆ ತಲುಪಿದ ಬಳಿಕ ಮಾಜಿ ಮುಖ್ಯಮಂತ್ರಿಗಳು ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದರು. ಇಲ್ಲೂ ಕುಮಾರಸ್ವಾಮಿ ಅವರು ಪಕ್ಷವನ್ನು ವಿಸರ್ಜಿಸುವ (dissolve) ಮಾತಾಡಿ ಜನರಲ್ಲಿ ಗೊಂದಲ ಮೂಡಿಸಿದರು. ತಮ್ಮ ಪಕ್ಷಕ್ಕೆ 5-ವರ್ಷ ಅಧಿಕಾರ ನಡೆಸುವ ಅವಕಾಶ ನೀಡಿದರೆ ರೈತ ಕುಟುಂಬಗಳು ಮಾತ್ರವಲ್ಲದೆ ಬಡ ಕೂಲಿ ಕಾರ್ಮಿಕರ (Labourer) ಮಾಸಿಕ ಆದಾಯವನ್ನು ಕನಿಷ್ಟ 15,000 ಮಾಡುವುದಾಗಿ ಹೇಳಿ ಅದು ತಮ್ಮಿಂದ ಸಾಧ್ಯವಾಗದಿದ್ದರೆ ಪಕ್ಷ ವಿಸರ್ಜಿಸುವುದಾಗಿ ಹೇಳುತ್ತಾರೆ. ಅವರು ಹತಾಷೆಯಲ್ಲಿ ಪಕ್ಷವನ್ನು ವಿಸರ್ಜಿಸಿದರೆ ರಾಜ್ಯದ ಬಡ ಜನತೆಗೆ ಅಗುವ ಲಾಭ ನಷ್ಟವಾದರೂ ಏನು? ಕುಮಾರಸ್ವಾಮಿಯೇ ಹೇಳಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 30, 2023 06:15 PM
Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.