PM Modi In Bengaluru: ವಂದೇ ಭಾರತ್ ಎಕ್ಸ್​ಪ್ರೆಸ್ ಟ್ರೇನಲ್ಲಿ ಬೆಂಗಳೂರಿಂದ ಹೊರಟ ಮೊದಲ ಪ್ರಯಾಣಿಕರ ಸಂಭ್ರಮ, ರೋಮಾಂಚನ ಅಷ್ಟಿಷ್ಟಲ್ಲ!

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Nov 11, 2022 | 12:10 PM

ಮತ್ತೊಬ್ಬರು ಇಂಥ ಟ್ರೇನ್ ಗಳನ್ನು ಕೇವಲ ಇಂಗ್ಲಿಷ್ ಸಿನಿಮಾಗಳಲ್ಲಿ ನೋಡ್ತಾ ಇದ್ದಿದ್ದು, ಆದರೆ ಈಗ ಇಂಥದರಲ್ಲೇ ಪ್ರಯಾಣಿಸುತ್ತಿರುವುದು ರೋಚಕ ಅನುಭವ ಅಂತ ಹೇಳಿದ್ದಾರೆ.

ಬೆಂಗಳೂರು:  ವಂದೇ ಭಾರತ ಎಕ್ಸ್ ಪ್ರೆಸ್ ಟ್ರೇನನ್ನು (Vande Bharath Express) ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಹಸಿರು ನಿಶಾನೆ ತೋರಿದ ಬಳಿಕ ಅದರಲ್ಲಿ ಬೆಂಗಳೂರಿಂದ ಹೊರಟ ಮೊದಲ ಪ್ರಯಾಣಿಕರು ರೋಮಾಂಚಿತರಾಗಿದ್ದು ಅತ್ಯಂತ ಸ್ವಾಭಾವಿಕವಾಗಿತ್ತು. ಅದಕ್ಕೆ ಕಾರಣಗಳು ಹಲವಾರು. ಸಂಸ್ಥೆಯೊಂದರ ಉದ್ಯೋಗಿಗಳು ಈ ಟ್ರೇನಲ್ಲಿ ಇವತ್ತು ಬೆಂಗಳೂರಿನಿಂದ ಚೆನೈಗೆ (Chennai) ಪ್ರಯಾಣಿಸುತ್ತಿದ್ದು ಅವರು ತಮ್ಮ ಸಂಭ್ರಮ, ರೋಮಾಂಚನವನ್ನು ಟಿವಿ9 ಕನ್ನಡ ವಾಹಿನಿಯ ಪ್ರತಿನಿಧಿಯೊಂದಿಗೆ ಹಂಚಿಕೊಂಡಿದ್ದಾರೆ. ಟ್ರೇನಲ್ಲಿ ಕೂತು ತೀರ ಸನಿಹದಿಂದ ಪ್ರಧಾನಿಗಳನ್ನು ನೋಡುವ ಅವಕಾಶ ಸಿಕ್ಕಿದ್ದು ಸೌಭಾಗ್ಯ ಅಂತ ಒಬ್ಬರು ಹೇಳಿದರೆ; ಮತ್ತೊಬ್ಬರು ಇಂಥ ಟ್ರೇನ್ ಗಳನ್ನು ಕೇವಲ ಇಂಗ್ಲಿಷ್ ಸಿನಿಮಾಗಳಲ್ಲಿ ನೋಡ್ತಾ ಇದ್ದಿದ್ದು, ಆದರೆ ಈಗ ಇಂಥದರಲ್ಲೇ ಪ್ರಯಾಣಿಸುತ್ತಿರುವುದು ರೋಚಕ ಅನುಭವ ಅಂತ ಹೇಳಿದ್ದಾರೆ.

Follow Us
TV9 Web

TV9 Kannada

Read More