PM Modi in Udupi Live: ಉಡುಪಿಯಲ್ಲಿ ಪ್ರಧಾನಿ ಮೋದಿ, ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗಿ

Updated on: Nov 28, 2025 | 12:13 PM

ಪ್ರಧಾನಿ ಮೋದಿ ಅವರು ಇಂದು ಉಡುಪಿಗೆ ಭೇಟಿ ನೀಡಿದ್ದು, ಭವ್ಯ ರೋಡ್‌ಶೋ ಮೂಲಕ ಕೃಷ್ಣ ಮಠಕ್ಕೆ ಆಗಮಿಸಿದರು. ಅಲ್ಲಿ ವಿಶೇಷ ಪೂಜೆ ಸಲ್ಲಿಸಿ, ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪಾಲ್ಗೊಂಡರು. ಇದೇ ವೇಳೆ ಅನಂತ ಪದ್ಮನಾಭ ಪ್ರತಿಮೆಯನ್ನು ಅನಾವರಣಗೊಳಿಸಿದರು. ಸಾವಿರಾರು ಜನರು ಮೋದಿ ಅವರನ್ನು ನೋಡಲು ಸೇರಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ನಂತರ ಅವರು ಗೋವಾಕ್ಕೆ ತೆರಳಲಿದ್ದಾರೆ.

ಉಡುಪಿ, ನ.28: ಪ್ರಧಾನಿ ಮೋದಿ (PM Modi) ಅವರು ಇಂದು ಕಡಲನಗರಿ ಉಡುಪಿಗೆ ಆಗಮಿಸಿದ್ದು,  ಇದೀಗ ಅವರು ​​  ರೋಡ್​​​ ಶೋ  ಮೂಲಕ ಬಂದು ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಅಲ್ಲಿಂದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸುತ್ತಿದ್ದಾರೆ. ಇದರ ಜತೆಗೆ  ಅನಂತ ಪದ್ಮನಾಭ ಪ್ರತಿಮೆಯನ್ನು ಅನಾವರಣಗೊಳಿಸುತ್ತಿದ್ದು,  ಇದೀಗ  ಉಡುಪಿಯಲ್ಲಿ  ಆಗುತ್ತಿರುವ ಈ ಕಾರ್ಯಕ್ರಮದ ಲೈವ್​​ ವಿಡಿಯೋ ಇಲ್ಲಿದೆ ನೋಡಿ ​​​

Published on: Nov 28, 2025 10:48 AM