Video: ಟೋಕಿಯೋಗೆ ಬಂದಿಳಿದ ಪ್ರಧಾನಿ ಮೋದಿಗೆ ಆದರದ ಸ್ವಾಗತ
ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಟೋಕಿಯೋಗೆ ತೆರಳಿದ್ದಾರೆ. ಭಾರತೀಯ ವಲಸಿಗರು ಮೋದಿಯನ್ನು ನೋಡಲು ಕಾತುರದಿಂದ ಕಾದು ಕುಳಿತ್ತಿದ್ದರು.ಪ್ರಧಾನಿ ಮೋದಿ ಇಂದು ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರನ್ನು ಭೇಟಿಯಾಗಲಿದ್ದಾರೆ. ಎರಡು ದಿನಗಳ ದೇಶ ಭೇಟಿಯ ಸಮಯದಲ್ಲಿ, ಪ್ರಧಾನಿಯವರು ಟೋಕಿಯೊದಲ್ಲಿ ಜಪಾನಿನ ಕೈಗಾರಿಕೋದ್ಯಮಿಗಳು ಮತ್ತು ರಾಜಕೀಯ ನಾಯಕರನ್ನು ಸಹ ಭೇಟಿ ಮಾಡಲಿದ್ದಾರೆ.
ಟೋಕಿಯೋ, ಆಗಸ್ಟ್ 29: ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಟೋಕಿಯೋಗೆ ತೆರಳಿದ್ದಾರೆ. ಭಾರತೀಯ ವಲಸಿಗರು ಮೋದಿಯನ್ನು ನೋಡಲು ಕಾತುರದಿಂದ ಕಾದು ಕುಳಿತ್ತಿದ್ದರು.ಪ್ರಧಾನಿ ಮೋದಿ ಇಂದು ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರನ್ನು ಭೇಟಿಯಾಗಲಿದ್ದಾರೆ. ಎರಡು ದಿನಗಳ ದೇಶ ಭೇಟಿಯ ಸಮಯದಲ್ಲಿ, ಪ್ರಧಾನಿಯವರು ಟೋಕಿಯೊದಲ್ಲಿ ಜಪಾನಿನ ಕೈಗಾರಿಕೋದ್ಯಮಿಗಳು ಮತ್ತು ರಾಜಕೀಯ ನಾಯಕರನ್ನು ಸಹ ಭೇಟಿ ಮಾಡಲಿದ್ದಾರೆ.
ಮೋದಿಯವರ ಎರಡು ದಿನಗಳ ಭಾರತ ಭೇಟಿಯ ಸಂದರ್ಭದಲ್ಲಿ ಜಪಾನ್ ಸರ್ಕಾರ ಭಾರತಕ್ಕೆ 10 ಟ್ರಿಲಿಯನ್ ಯೆನ್ (USD 68 ಬಿಲಿಯನ್) ಹೂಡಿಕೆ ಗುರಿಯನ್ನು ಘೋಷಿಸುವ ಸಾಧ್ಯತೆಯಿದೆ. ಜಪಾನ್ ಭೇಟಿ ಮುಗಿಸಿದ ನಂತರ, ಪ್ರಧಾನಿ ಆಗಸ್ಟ್ 31 ರಿಂದ ಸೆಪ್ಟೆಂಬರ್ 1 ರವರೆಗೆ ಚೀನಾದಲ್ಲಿರಲಿದ್ದಾರೆ ಅಲ್ಲಿ ಅವರು ಟಿಯಾಂಜಿನ್‌ನಲ್ಲಿ ನಡೆಯುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 29, 2025 07:49 AM