PM Narendra Modi in US: ಯುಎಸ್ ಸಂಸತ್ತಿನಲ್ಲೂ ನಮಸ್ಕಾರ ಎನ್ನುತ್ತಲೇ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ

|

Updated on: Jun 23, 2023 | 11:01 AM

ಪ್ರಧಾನಿಯವರ ಪ್ರತಿ ಮಾತನ್ನು ಸಂಸತ್ ಸದಸ್ಯರು ದೀರ್ಘ ಕರತಾಡನದಿಂದ ಸ್ವಾಗತಿಸುವುದನ್ನು ನೋಡಬಹುದು, ಕೇಳಬಹುದು.

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಇಂದು ಅಮೆರಿಕದ ಸಂಸತ್ತನ್ನು (US Senate) ಉದ್ದೇಶಿಸಿ ಮಾತಾಡಿದರು. ಇದೊಂದು ಐತಿಹಾಸಿಕ ಘಟನೆಯಾಗಿದೆ ಯಾಕೆಂದರೆ, ಯುಎಸ್ ಕಾಂಗ್ರೆಸ್ ಅನ್ನು ಉದ್ದೇಶಿಸಿ ಎರಡು ಬಾರಿ ಮಾತಾಡಿದ ಮೊದಲ ಭಾರತದ  ಪ್ರಧಾನ ಮಂತ್ರಿ ನರೇಂದ್ರ ಮೋದಿಯಾಗಿದ್ದಾರೆ. ತಮ್ಮ ಭಾಷಣದ ಆರಂಭದಲ್ಲೇ ಪ್ರಧಾನಿ ಮೋದಿ ಈ ಅಂಶವನ್ನು ಪ್ರಸ್ತಾಪಿಸಿ ತನಗೆ ಇದು ಅತ್ಯಂತ ಗೌರವದ ಸಂಗತಿಯಾಗಿದೆ ಮತ್ತು ಈ ಅವಕಾಶ ಕಲ್ಪಿಸಿದ್ದಕ್ಕಾಗಿ ಅಮೆರಿಕದ ಸಂಸತ್ತಿಗೆ 1.4 ಬಿಲಿಯನ್ ಭಾರತೀಯರ (Indians) ಪರವಾಗಿ ಧನ್ಯವಾದ ಮತ್ತು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 7 ವರ್ಷಗಳ ಹಿಂದೆ ಮೋದಿ ಯುಎಸ್ ಸೆನೆಟ್ ನಲ್ಲಿ ಭಾಷಣ ಮಾಡಿದಾಗ ಹಾಜರಿದ್ದ ಸೆನೆಟರ್ ಗಳು ಪೈಕಿ ಕೆಲವರು ನಿಧನ ಹೊಂದಿದ್ದು ಅವರಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ ಸಲ್ಲಿಸಿದರು. ಪ್ರಧಾನಿಯವರ ಪ್ರತಿ ಮಾತನ್ನು ಸಂಸತ್ ಸದಸ್ಯರು ದೀರ್ಘ ಕರತಾಡನದಿಂದ ಸ್ವಾಗತಿಸುವುದನ್ನು ನೋಡಬಹುದು, ಕೇಳಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ