Gandhi Jayanti: ರಾಜಘಾಟ್​ನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ

|

Updated on: Oct 02, 2023 | 10:50 AM

ಪ್ರಧಾನಿ ಮೋದಿ ರಾಜ್​ಘಾಟ್​​ನಿಂದ ವಿಜಯಘಾಟ್ ಗೆ ತೆರಳಿ ಭಾರತದ ಎರಡನೇ ಪ್ರಧಾನ ಮಂತ್ರಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಮಾಧಿಗೂ ಪುಷ್ಟನಮನ ಸಲ್ಲಿಸಿದರು. ಅಕ್ಟೋಬರ್ ಎರಡರಂದೇ ಜನಿಸಿದ್ದ ಶಾಸ್ತ್ರಿಯವರ 120 ನೇ ಜನ್ಮ ವಾರ್ಷಿಕೋತ್ಸವನ್ನು ಭಾರತ ಇಂದು ಆಚರಿಸುತ್ತಿದೆ.

ದೆಹಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ (Mahatma Gandhi) 154ನೇ ಜಯಂತಿ ಆಗಿರುವ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಮಹಾತ್ಮನಿಗೆ ಪುಷ್ಪ ನಮನ ಸಲ್ಲಿಸಿದರು. ಸೋಮವಾರ ಬೆಳಗಿನ ಸಮಯದಲ್ಲಿ ಲೋಕ ಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಇತರ ಕೆಲವರೊಂದಿಗೆ ರಾಜಧಾನಿಯಲ್ಲಿರುವ ರಾಜ್ ಘಾಟ್ ಗೆ ಆಗಮಿಸಿದ ಪ್ರಧಾನಿ ಮೋದಿ ಬಾಪೂಜಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಗಾಂಧೀಜಿ ಸಮಾಧಿ ಬಳಿ ಬಂದು ಪುಷ್ಪಾರ್ಚನೆ ಮಾಡುವ ಪ್ರಧಾನಿ, ಒಂದು ನಿಮಿಷ ಮೌನವಾಗಿ ಪ್ರಾರ್ಥನೆ ಸಲ್ಲಿಸಿದ ನಂತರ ಸಮಾಧಿಯ ಪ್ರದಕ್ಷಿಣೆ ಹಾಕುವುದನ್ನು ವಿಡಿಯೋದಲ್ಲಿ ನೋಡಬಹುದು. ಪ್ರತಿವರ್ಷದಂತೆ ಸಮಾಧಿಯ ಬಳಿ ಸರ್ವಧರ್ಮ ಪ್ರಾರ್ಥನೆ ಆಯೋಜಿಸಲಾಗಿದೆ. ಪ್ರಾರ್ಥನೆ ಬಳಿಕ ಪ್ರಧಾನಿ ಮೋದಿ ಅಲ್ಲಿ ನೆರೆದ ಗಣ್ಯರಿಗೆ ನಮಸ್ಕರಿಸುತ್ತ್ತಾ ರಾಜ್ ಘಾಟ್ ನಿಂದ ಬೀಳುತ್ತಾರೆ. ಅಲ್ಲಿಂದ ಅವರು ವಿಜಯಘಾಟ್ ಗೆ ತೆರಳಿ ಭಾರತದ ಎರಡನೇ ಪ್ರಧಾನ ಮಂತ್ರಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ (Lal Bahadur Shastri) ಅವರ ಸಮಾಧಿಗೂ ಪುಷ್ಟನಮನ ಸಲ್ಲಿಸಿದರು. ಅಕ್ಟೋಬರ್ ಎರಡರಂದೇ ಜನಿಸಿದ್ದ ಶಾಸ್ತ್ರಿಯವರ 120 ನೇ ಜನ್ಮ ವಾರ್ಷಿಕೋತ್ಸವನ್ನು ಭಾರತ ಇಂದು ಆಚರಿಸುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 02, 2023 10:50 AM