ಮಹಾರಾಷ್ಟ್ರದ ಪನ್ವೇಲ್ನಲ್ಲಿ ಇಸ್ಕಾನ್ನಿಂದ ಪ್ರಧಾನಿ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರಕ್ಕೆಂದು ಪ್ರಧಾನಿ ನರೇಂದ್ರ ಮೋದಿ ಇಂದು ಪನ್ವೇಲ್‌ಗೆ ಆಗಮಿಸಿದ್ದರು. ಈ ವೇಳೆ ಪನ್ವೇಲ್ನಲ್ಲಿ ಇಸ್ಕಾನ್ ಸನ್ಯಾಸಿಗಳಿಂದ ಪ್ರಧಾನಿ ಮೋದಿಗೆ ವಿಶೇಷ ಸ್ವಾಗತ ನೀಡಲಾಯಿತು. ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮುಂಬೈ: ಚುನಾವಣಾ ಪ್ರಚಾರಕ್ಕೆಂದು ಮಹಾರಾಷ್ಟ್ರಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಇದೇ ವೇಳೆ ಪನ್ವೇಲ್ನಲ್ಲಿ ಇಸ್ಕಾನ್ಗೆ ಭೇಟಿ ನೀಡಿದರು. ಈ ವೇಳೆ ಪನ್ವೇಲ್ನ ಇಸ್ಕಾನ್ ದೇವಸ್ಥಾನದ ಸ್ವಯಂಸೇವಕರು “ಹರೇ ರಾಮ, ಹರೇ ಕೃಷ್ಣ” ಹಾಡನ್ನು ಹಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶೇಷವಾಗಿ ಸ್ವಾಗತ ಮಾಡಿದರು. ಈ ಮೂಲಕ ಮಹಾರಾಷ್ಟ್ರದ ಪನ್ವೇಲ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ಕಾನ್ ಸನ್ಯಾಸಿಗಳು ವಿಶೇಷ ಸ್ವಾಗತ ಕೋರಿದರು. ಇದಾದ ಬಳಿಕ ಮೋದಿ ಚುನಾವಣಾ ಪ್ರಚಾರಕ್ಕೆ ತೆರಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us