PM Narendra Modi: ಪಿಯಾನೋ ನುಡಿಸಿ ಪ್ರಧಾನಿ ಮೋದಿಯ ಮನಗೆದ್ದಳು ಕರ್ನಾಟಕದ ಪುಟ್ಟ ಬಾಲಕಿ

|

Updated on: Apr 25, 2023 | 7:21 PM

ಈ ಹಾಡನ್ನು ಕವಿ ಕೆಎಸ್​ ನರಸಿಂಹಸ್ವಾಮಿಯವರು ಬರೆದಿದ್ದಾರೆ. ವಿಶೇಷ ಪ್ರತಿಭೆಗಳನ್ನು ಗುರುತಿಸುವುದು ಮತ್ತು ಶ್ಲಾಘಿಸುವುದನ್ನು ಪ್ರಧಾನಿ ಮೋದಿಯವರು ಸದಾಕಾಲ ಮಾಡುತ್ತಿರುತ್ತಾರೆ. ಅದರಂತೆ, ಈ ಬಾರಿ ಕರ್ನಾಟಕದ ಪುಟ್ಟ ಬಾಲಕಿ ಮೋದಿಯವರ ಮನಸ್ಸು ಗೆದ್ದಿದ್ದಾಳೆ.

ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತಾ, ತಂಬೆಲರಲಿ ಹಬ್ಬುತ್ತಿದೆ ಕೋಕಿಲ ಸಂಗೀತಾ ಎಂಬ ಕನ್ನಡ ಹಾಡಿಗೆ ಪಿಯಾನೋ ನುಡಿಸಿದ ಪುಟ್ಟ ಬಾಲಕಿಯ ಪ್ರತಿಭೆಗೆ ಪ್ರಧಾನಿ ನರೇಂದ್ರ ಮೋದಿ ಮನಸೋತಿದ್ದಾರೆ. ಅಷ್ಟೇ ಅಲ್ಲದೆ, ಕನ್ನಡದಲ್ಲೇ ಟ್ವೀಟ್ ಮಾಡಿದ್ದು, ಈ ವಿಡಿಯೋ ಪ್ರತಿಯೊಬ್ಬರ ಮುಖದ ಮೇಲೆ ಮುಗುಳುನಗೆ ತರಿಸಬಹುದು. ಅನನ್ಯ ಪ್ರತಿಭೆ ಹಾಗೂ ಸೃಜನಶೀಲತೆ. ಶಾಲ್ಮಲಿಗೆ ಶುಭಹಾರೈಕೆಗಳು ಎಂದು ಬರೆದಿದ್ದಾರೆ. ಆಕೆಯ ತಾಯಿ ಹಾಡಿನ ಸಾಲುಗಳನ್ನು ಹೇಳುತ್ತಿದ್ದಂತೆ ಬಾಲಕಿ ಕೂಡ ಪಿಯಾನೋದಲ್ಲಿ ಅದೇ ಹಾಡನ್ನು ನುಡಿಸುವ ಮೂಲಕ ಲಕ್ಷಾಂತರ ಮಂದಿಯ ಶ್ಲಾಘನೆಗೆ ಪಾತ್ರವಾಗಿದ್ದಾಳೆ. ಈ ಹಾಡನ್ನು ಕವಿ ಕೆಎಸ್​ ನರಸಿಂಹಸ್ವಾಮಿಯವರು ಬರೆದಿದ್ದಾರೆ. ವಿಶೇಷ ಪ್ರತಿಭೆಗಳನ್ನು ಗುರುತಿಸುವುದು ಮತ್ತು ಶ್ಲಾಘಿಸುವುದನ್ನು ಪ್ರಧಾನಿ ಮೋದಿಯವರು ಸದಾಕಾಲ ಮಾಡುತ್ತಿರುತ್ತಾರೆ. ಅದರಂತೆ, ಈ ಬಾರಿ ಕರ್ನಾಟಕದ ಪುಟ್ಟ ಬಾಲಕಿ ಮೋದಿಯವರ ಮನಸ್ಸು ಗೆದ್ದಿದ್ದಾಳೆ.