ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 26 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ: ಆರ್ ಅಶೋಕ

|

Updated on: Aug 24, 2023 | 7:34 PM

ಬೆಳಗ್ಗೆ 6 ಗಂಟೆಗೆ ಪ್ರಧಾನಿ ಮೋದಿ ಐಎಸ್​​​​ಟಿಆರ್​ಎಸಿ ​​ಕೇಂದ್ರಕ್ಕೆ ಭೇಟಿ ನೀಡಿ ವಿಜ್ಞಾನಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಪೀಣ್ಯದಲ್ಲಿ ಸುಮಾರು ಒಂದು ಕಿಮೀ ದೂರದಷ್ಟು ಒಂದು ರೋಡ್ ಶೋ ನಡೆಸಲಾಗುವುದು ಮತ್ತು ಅದರ ಸಿದ್ಧತೆ ಮತ್ತು ಸ್ಥಳ ಪರಶೀಲನೆಗೆ ತಾವು ಮುನಿರಾಜು ಮತ್ತು ಬೈರತಿ ಬಸವರಾಜ ಜೊತೆ ಪೀಣ್ಯಗೆ ಹೋಗುತ್ತಿರುವುದಾಗಿ ಅಶೋಕ ಹೇಳಿದರು.

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಆಗಸ್ಟ್ 26 ರಂದು ಬೆಂಗಳೂರಿಗೆ ಆಗಮಿಸಿ ಚಂದ್ರಯಾನ-3 ವಿಕ್ರಮ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಚಂದ್ರನ ಮೇಲೆ ಲ್ಯಾಂಡ್ ಮಾಡಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳನ್ನು (ISRO scientists) ಅಭಿನಂದಿಸಲಿದ್ದಾರೆ ಎಂದು ಬಿಜೆಪಿ ಶಾಸಕ ಆರ್ ಅಶೋಕ (R Ashoka) ಹೇಳಿದರು. ನಗರದ ಬಿಜೆಪಿ ಕಚೇರಿ ಮುಂದೆ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತಾಡಿದ ಅಶೋಕ, ಶನಿವಾರ ಬೆಳಗ್ಗೆ 5.15 ಕ್ಕೆ ಪ್ರಧಾನಿ ಮೋದಿ ಹೆಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ ಮತ್ತು ಅವರ ಸ್ವಾಗತಕ್ಕೆ ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ನೆರೆಯುವ ಕಾರಣ ಅಲ್ಲಿ ಭಾಷಣ ಮಾಡುವ ಸಾಧ್ಯತೆ ಇದೆಯೆಂದು ಹೇಳಿದರು. ನಂತರ 6 ಗಂಟೆಗೆ ಪ್ರಧಾನಿ ಮೋದಿ ಐಎಸ್​​​​ಟಿಆರ್​ಎಸಿ ​​ಕೇಂದ್ರಕ್ಕೆ (ISRO Telemetry Tracking and Command Network) ಭೇಟಿ ನೀಡಿ ವಿಜ್ಞಾನಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಪೀಣ್ಯದಲ್ಲಿ ಸುಮಾರು ಒಂದು ಕಿಮೀ ದೂರದಷ್ಟು ಒಂದು ರೋಡ್ ಶೋ ನಡೆಸಲಾಗುವುದು ಮತ್ತು ಅದರ ಸಿದ್ಧತೆ ಮತ್ತು ಸ್ಥಳ ಪರಶೀಲನೆಗೆ ತಾವು ಮುನಿರಾಜು ಮತ್ತು ಬೈರತಿ ಬಸವರಾಜ ಜೊತೆ ಪೀಣ್ಯಗೆ ಹೋಗುತ್ತಿರುವುದಾಗಿ ಅಶೋಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on