ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಸ್ಯಾಂಟ್ರೋ ರವಿಯ ವಿಚಾರಣೆ ನಡೆಸಿದ ಪೊಲೀಸರು

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Jan 14, 2023 | 2:25 PM

ಅವನ ಕಾರು ಡ್ರೈವರ್ ಸತೀಶ್ ನನ್ನು ಸಹ ಪೊಲೀಸರು ವಿವಾರಣೆ ನಡೆಸುತ್ತಿದ್ದಾರೆ. ಶನಿವಾರವೇ ರವಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದೆಂದು ಹೇಳಲಾಗುತ್ತಿದೆ.

ಮೈಸೂರು: ಇಷ್ಟು ವರ್ಷಗಳ ಕಾಲ ರಾಜಕಾರಣಿ ಮತ್ತು ಅಧಿಕಾರಿಗಳ ಬಳಿ ಯುವತಿಯರನ್ನು ಕಳಿಸಿ ನಂತರ ಅವರನ್ನೆಲ್ಲ ಬ್ಲ್ಯಾಕ್ಮೇಲ್ (blackmail) ಮಾಡುತ್ತಾ ಮೈ ಬನ್ ಗಯಾ ಕರೋಡ್ ಪತಿ ಅಂದುಕೊಳ್ಳುತ್ತಾ ತನ್ನ ಹೆಸರಿನ ಜೊತೆ ಸೇರಿಕೊಂಡಿದ್ದ ಸ್ಯಾಂಟ್ರೋ ಕಾರನ್ನು ಬಿಟ್ಟಿ ಐಷಾರಾಮಿ ಕಾರುಗಳಲ್ಲಿ ಸುತ್ತುತ್ತಿದ್ದ ಸ್ಯಾಂಟ್ರೋ ರವಿಗೆ (Santro Ravi) ರಾಹುಕಾಲ ವಕ್ಕರಿಸಿದೆ ಮಾರಾಯ್ರೇ. ಮೈಸೂರಿನ ವಿಜಯನಗರ (Vijayanagar) ಠಾಣೆಯಲ್ಲಿ ಪೊಲೀಸರು ಅವನ ವಿಚಾರಣೆ ನಡೆಸಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಅವನ ಕಾರು ಡ್ರೈವರ್ ಸತೀಶ್ ನನ್ನು ಸಹ ಪೊಲೀಸರು ವಿವಾರಣೆ ನಡೆಸುತ್ತಿದ್ದಾರೆ. ಶನಿವಾರವೇ ರವಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದೆಂದು ಹೇಳಲಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
TV9 Web

TV9 Kannada

Read More