Ugadi Gambling: ಗೌರಿಬಿದನೂರು ಬಳಿಯ ಫಾರ್ಮ್ ಹೌಸೊಂದರಲ್ಲಿ ಜೂಜಾಡುತ್ತಿದ್ದ ಒಬ್ಬ ಹೆಡ್ ಕಾನ್ ಸ್ಟೇಬಲ್ ಸೇರಿ 11 ಜನರ ಬಂಧನ
ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಸತ್ಯನಾರಾಯಣ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಬಂಧನಕ್ಕೊಳಗಾದವರಲ್ಲಿ ನಗರ ಸಭಾ ಸದಸ್ಯ ಆರ್ ಪಿ ಗೋಪಿನಾಥ ಕೂಡ ಒಬ್ಬರು.
ಚಿಕ್ಕಬಳ್ಳಾಪುರ: ಒಂದೆಡೆ ಮಂಡ್ಯ ಜಿಲ್ಲೆಯ ಪೊಲೀಸರು ಯುಗಾದಿ ಹಬ್ಬದ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಜೂಜಾಟವನ್ನು ನಿಷೇಧಿಸಿದ್ದರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಸಾಗಾನಹಳ್ಳಿಯಲ್ಲಿರು ತೋಟದ ಮನೆಯಲ್ಲಿ ಇತರ 10 ಜನರೊಂದಿಗೆ ಜೂಜಾಡುತ್ತಿದ್ದ ಚಿಕ್ಕಬಳ್ಳಾಪುರದ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಖಲಂದರ್ ಸೆರೆಸಿಕ್ಕಿದ್ದಾರೆ. ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಸತ್ಯನಾರಾಯಣ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಬಂಧನಕ್ಕೊಳಗಾದವರಲ್ಲಿ ನಗರ ಸಭಾ ಸದಸ್ಯ ಆರ್ ಪಿ ಗೋಪಿನಾಥ ಕೂಡ ಒಬ್ಬರು. ಸ್ಥಳದಿಂದ ರೂ. 1,50,000 ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 22, 2023 11:13 AM