Karnataka Assembly Polls 2023: ರಾಜ್ಯ ಚುನಾವಣಾ ರಾಜಕಾರಣದಲ್ಲಿ ರಕ್ತದ ಉಲ್ಲೇಖ, ರಕ್ತದಿಂದ ಬರೆದುಕೊಡುವ ಶಪಥ ಮಾಡುತ್ತಿರುವ ನಾಯಕರು!
ನಮ್ಮ ನಾಯಕರು ತಮ್ಮ ರಕ್ತವನ್ನು ಹೀಗೆ ಬರೆಯಲು ಉಪಯೋಗಿಸಿ ಹಾಳು ಮಾಡುವ ಬದಲು ದಾನ ಮಾಡಿದರೆ ಅದರ ಅಗತ್ಯವಿರುವವರ ಜೀವವಾದರೂ ಉಳಿಯುತ್ತದೆ.
ಮೈಸೂರು: ರಾಜ್ಯ ಚುನಾವಣಾ ರಾಜಕಾರಣದಲ್ಲಿ ರಕ್ತದ ಉಲ್ಲೇಖ ಪದೇಪದೆ ಆಗುತ್ತಿದೆ. ಹುಬ್ಬಳ್ಳಿಯಲ್ಲಿ ಬಿಎಸ್ ಯಡಿಯೂರಪ್ಪನವರು (BS Yediyurappa) ಜಗದೀಶ್ ಶೆಟ್ಟರ್ (Jagadish Shettar) ಸೋಲುವುದು ಖಚಿತ ಅಂತ ರಕ್ತದಲ್ಲಿ ಬರೆದುಕೊಡ್ತೀನಿ ಅಂತ ಹೇಳಿದ್ದನ್ನು ನೀವು ಕೇಳಿಸಿಕೊಂಡಿರಬಹುದು. ಇಂದು ಮೈಸೂರಲ್ಲಿ ಕರ್ನಾಟಕದ ಎಐಸಿಸಿ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಜೊತೆ ಜಂಟಿ ಸುದ್ದಿಗೋಷ್ಟಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ರಾಜ್ಯದೆಲ್ಲೆಡೆ ಬಿಜೆಪಿ ಸರ್ಕಾರ 40% ಕಮೀಶನ್ ಸರ್ಕಾರ ಅಂತ ಸಾಬೀತಾಗಿದೆ. ಹಾಗಾಗಿ, ಬಿಜೆಪಿಗೆ ಈ ಬಾರಿ 40ಕ್ಕಿಂತ ಹೆಚ್ಚು ಸೀಟು ಸಿಗಲ್ಲ, ಕಾಂಗ್ರೆಸ್ 150 ಗಳೊಂದಿಗೆ ಜಯಭೇರಿ ಬಾರಿಸಲಿದೆ ಎಂದು ರಕ್ತದಲ್ಲಿ ಬರೆದು ಕೊಡುವುದಾಗಿ ಹೇಳಿದರು. ನಮ್ಮ ನಾಯಕರು ತಮ್ಮ ರಕ್ತವನ್ನು ಹೀಗೆ ಬರೆಯಲು ಉಪಯೋಗಿಸಿ ಹಾಳು ಮಾಡುವ ಬದಲು ದಾನ ಮಾಡಿದರೆ ಅದರ ಅಗತ್ಯವಿರುವವರ ಜೀವವಾದರೂ ಉಳಿಯುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ