Pradeep Eshwar: ಪರೋಕ್ಷವಾಗಿ ಡಾ ಸುಧಾಕರ್​ಗೆ ಟಾಂಗ್ ಕೊಟ್ಟ ಶಾಸಕ ಪ್ರದೀಪ್ ಈಶ್ವರ್

ಆಯೇಷಾ ಬಾನು

Updated on: May 24, 2023 | 3:28 PM

ಒಳ್ಳೆ ಕೆಲಸ ಮಾಡುದ್ರೆ ಅಭಿಮಾನ ಸಿಗೋದು. ಹಗಲು ದರೋಡೆ ಮಾಡುದ್ರೆ ಎಲ್ಲಿ ಸಿಗುತ್ತೆ. ಸ್ವಲ್ಪ ಒಳ್ಳೆದು ಮಾಡಿದ್ರೆ ನಾನು ಇಲ್ಲೇಕೆ ಇರ್ತಿದೆ ಎಂದು ಪರೋಕ್ಷವಾಗಿ ಡಾ ಸುಧಾಕರ್ ಅವರ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದ್ದಾರೆ.

ನನ್ನಂತ ಅನಾಥ ಹುಡುಗನಿಗೆ ಟಿಕೆಟ್ ಕೊಟ್ಟು ವಿಧಾನಸೌಧಕ್ಕೆ ಬರುವಂತೆ ಮಾಡಿದೆ ಅಂದ್ರೆ, ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯಕ್ಕೂ ಐಡಿಯಾಲಾಜಿಗೆ ತಂದ ಗೆಲುವು ಇದು. ನಮ್ಮ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದ ಸಲ್ಲುಸ್ತಿನಿ. ಒಳ್ಳೆ ಕೆಲಸ ಮಾಡುದ್ರೆ ಅಭಿಮಾನ ಸಿಗೋದು. ಹಗಲು ದರೋಡೆ ಮಾಡುದ್ರೆ ಎಲ್ಲಿ ಸಿಗುತ್ತೆ. ಸ್ವಲ್ಪ ಒಳ್ಳೆದು ಮಾಡಿದ್ರೆ ನಾನು ಇಲ್ಲೇಕೆ ಇರ್ತಿದೆ ಎಂದು ಪರೋಕ್ಷವಾಗಿ ಡಾ ಸುಧಾಕರ್ ಅವರ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದ್ದಾರೆ.

ಚಿಕ್ಕಬಳ್ಳಾಪುರವನ್ನು ಮಾದರಿ ಕ್ಷೇತ್ರ ಮಾಡ್ತಿನಿ. ನನ್ನ ಕ್ಷೇತ್ರದಲ್ಲಿ 14 ಸರ್ಕಾರಿ ಶಾಲೆಗಳಿವೆ. 9 ನೇ ಕ್ಲಾಸ್ ನಿಂದ ನೀಟ್ ಮತ್ತೆ ಐಐಟಿ ಫೌಂಡೇಶನ್ ಸರ್ಕಾರಿ ಶಾಲೆಯಲ್ಲಿ ಶುರುಮಾಡ್ತಿನಿ. ಈಗ 9 ನೇ ತರಗತಿಯಲ್ಲಿ ಸಾವಿರ ಮಕ್ಕಳಿದ್ದಾರೆ ಎಂದರು. ಇದೇ ವೇಳೆ, ನಾನು ದ್ವೇಷ ರಾಜಕಾರಣ ಮಾಡುವುದಿಲ್ಲ. ನಮ್ಮ ಸರ್ಕಾರ ಯಾವ ಸ್ಟ್ಯಾಂಡ್ ತಗೆದುಕೊಳ್ಳಿತ್ತೋ ಗೊತ್ತಿಲ್ಲ. ನನ್ನ ಮೇಲೆ 20 ಕೇಸ್ ಹಾಕಿದ್ದಾರೆ. ಅವರಾಗೆ ಅವರು ಹಾಕಿಸಿಕೊಂಡರೆ ನಾನು ಜವಾಬ್ದಾರನಲ್ಲ. ಪ್ರತಿ ದಿನ 6 ರಿಂದ 9 ಸಂಜೆ 6ರಿಂದ 9 ಮನೆ ಮನೆಗೆ ಹೋಗ್ತಿನಿ ಎಂದು ಪ್ರದೀಪ್ ಈಶ್ವರ್ ತಿಳಿಸಿದರು.

Loading...
Unable to load recommendations.
Follow Us