ಏಳು ವರ್ಷ ಗ್ಯಾಪ್ ಪಡೆದಿದ್ದೇಕೆ ಪ್ರಣಮ್ ದೇವರಾಜ್? ಸ್ಪಷ್ಟನೆ ಕೊಟ್ಟ ನಟ
Pranam Devaraj: ‘ಕುಮಾರಿ 21 ಎಫ್’ ಸಿನಿಮಾದಲ್ಲಿ ನಟ ಪ್ರಣಮ್ ದೇವರಾಜ್ ಅವರು ನಟಿಸಿದರು. ಈ ಸಿನಿಮಾ ಸೂಪರ್ ಹಿಟ್ ಆಗಲು ವಿಫಲವಾಯಿತು. ಈ ಚಿತ್ರದ ಬಗ್ಗೆ ಪ್ರಣಮ್ ದೇವರಾಜ್ ಅವರು ಮಾತನಾಡಿದ್ದಾರೆ. ‘ಸನ್ ಆಫ್ ಮುತ್ತಣ್ಣ’ ಚಿತ್ರದಲ್ಲಿ ಅವರು ಅಭಿನಯಿಸಿದ್ದಾರೆ.
ನಟ ಪ್ರಣಮ್ ದೇವರಾಜ್ (Pranam Devaraj) ಅವರು ಈ ಮೊದಲು ‘ಕುಮಾರಿ 21 ಎಫ್’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಚಿತ್ರ 2018ರ ಆಗಸ್ಟ್ 3ರಂದು ರಿಲೀಸ್ ಆಯಿತು. ಆ ಬಳಿಕ ಅವರು ಸಿನಿಮಾ ರಂಗದಿಂದ ದೂರವೇ ಉಳಿದರು. ಇದಕ್ಕೆ ಕಾರಣ ಏನು ಎಂಬುದನ್ನು ಹೇಳಿದ್ದಾರೆ. ‘ಸನ್ ಆಫ್ ಮುತ್ತಣ್ಣ’ ಚಿತ್ರದಲ್ಲಿ ಇವರು ನಟಿಸಿದ್ದಾರೆ. ‘ಕುಮಾರಿ 21 ಎಫ್ ಸಿನಿಮಾ ಅಷ್ಟಾಗಿ ಯಶಸ್ಸು ಕಂಡಿಲ್ಲ. ಇದಾದ ಬಳಿಕ ಕೊವಿಡ್ ಬಂತು. ಹೀಗಾಗಿ ಒಂದು ಗ್ಯಾಪ್ ಆಯಿತು’ ಎಂದು ವಿವರಿಸಿದ್ದಾರೆ ಪ್ರಣಣ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
