ಶಾಸಕ ಪ್ರದೀಪ್​ ಈಶ್ವರ್​ ವಿರುದ್ಧ ಸಿಡಿದೆದ್ದ ಮಾಜಿ ಸಂಸದ ಪ್ರತಾಪ್​ ಸಿಂಹ: ಏಕವಚನದಲ್ಲೇ ವಾಗ್ದಾಳಿ

Updated By: ಪ್ರಸನ್ನ ಹೆಗಡೆ

Updated on: Oct 24, 2025 | 2:00 PM

ತಮ್ಮ ತಾಯಿಯ ಬಗ್ಗೆ ಮಾತನಾಡಿರುವ ಕಾಂಗ್ರೆಸ್​ ಶಾಸಕ ಪ್ರದೀಪ್​ ಈಶ್ವರ್​ ವಿರುದ್ಧ ಮಾಜಿ ಸಂಸದ ಪ್ರತಾಪ್​ ಸಿಂಹ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಮುಳ್ಳಂದಿ ಮುಖದ ಕರ್ನಾಟಕದ ಏಕೈಕ ಕಾಮಿಡಿ ಪೀಸ್ ಅಂದ್ರೆ  ಪ್ರದೀಪ್ ಈಶ್ವರ್. ನಮ್ಮ ತಂದೆ ವಯಸ್ಸಿನಲ್ಲಿ ಇದ್ದಾಗ ಚಿಕ್ಕಬಳ್ಳಾಪುರ ಕಡೆ ಬಂದಿದ್ರೆ ನೀನು ಸುಂದರವಾಗಿ ಹುಟ್ಟುತ್ತಿದ್ದೆ. ನನ್ನ ಬಗ್ಗೆ ಮಾತಾಡುವಾಗ ಎಚ್ಚರಿಕೆ ಇರಬೇಕು ಮಗನೆ ಎಂದು ವಾರ್ನಿಂಗ್​ ಮಾಡಿದ್ದಾರೆ.

ಮೈಸೂರು, ಅಕ್ಟೋಬರ್​ 24: ಚಿಕ್ಕಬಳ್ಳಾಪುರ ಕಾಂಗ್ರೆಸ್​ ಶಾಸಕ ಪ್ರದೀಪ್​ ಈಶ್ವರ್​ ವಿರುದ್ಧ ಮಾಜಿ ಸಂಸದ ಪ್ರತಾಪ್​ ಸಿಂಹ (Pratap Simha) ವಾಗ್ದಾಳಿ ನಡೆಸಿದ್ದಾರೆ. ನನ್ನ ಬಗ್ಗೆ, ವೈಯಕ್ತಿಕ ವಿಚಾರದ ಬಗ್ಗೆ ಮಾತಾಡಿದ್ರೆ ಎಚ್ಚರ.  ಮುಳ್ಳಂದಿ ಮುಖದ ಕರ್ನಾಟಕದ ಏಕೈಕ ಕಾಮಿಡಿ ಪೀಸ್ ಅಂದ್ರೆ. ಪ್ರದೀಪ್ ಈಶ್ವರ್.  ನಮ್ಮ ತಂದೆ ವಯಸ್ಸಿನಲ್ಲಿ ಇದ್ದಾಗ ಚಿಕ್ಕಬಳ್ಳಾಪುರ ಕಡೆ ಬಂದಿದ್ರೆ ನೀನು ಸುಂದರವಾಗಿ ಹುಟ್ಟುತ್ತಿದ್ದೆ. ನನ್ನ ಬಗ್ಗೆ ಮಾತಾಡುವಾಗ ಎಚ್ಚರಿಕೆ ಇರಬೇಕು ಮಗನೆ ಎಂದು ಏಕವಚನದಲ್ಲೇ ಪ್ರತಾಪ್​ ಸಿಂಹ ಕಿಡಿ ಕಾರಿದ್ದಾರೆ. ಪ್ರದೀಪ್ ಈಶ್ವರ್​ಗೆ ಅವನ ಭಾಷೆಯಲ್ಲಿಯೇ ಉತ್ತರ ಹೇಳುತ್ತಿರುವುದಕ್ಕೆ ಕರ್ನಾಟಕದ ಜನರ ಕ್ಷಮೆ ಕೇಳುತ್ತೇನೆ ಎಂದೂ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Published on: Oct 24, 2025 01:59 PM