ವೈಷ್ಣವಿ ಬಟ್ಟೆ ಬಗ್ಗೆ ಅವಿನಾಶ್ ಕಮೆಂಟ್ ಮಾಡಿದ್ದು ಸರಿಯೇ? ಉತ್ತರಿಸಿದ ಪ್ರಥಮಾ ಪ್ರಸಾದ್

Edited By:

Updated on: Sep 15, 2026 | 2:56 PM

ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಪ್ರಥಮಾ ಪ್ರಸಾದ್ ತಮ್ಮ ಪಯಣ, ಟಾಸ್ಕ್‌ಗಳ ಕುರಿತು ಮಾತನಾಡಿದ್ದಾರೆ. ವೈಷ್ಣವಿ ಅವರ ಉಡುಗೆ ಕುರಿತು ಮೂಡಿದ ಚರ್ಚೆಗೆ ಪ್ರತಿಕ್ರಿಯಿಸಿ, ಅದು ಅವರ ಅಭಿಪ್ರಾಯ, ಅಭಿರುಚಿ ಎಂದಿದ್ದಾರೆ. ಮೂರು ಬಾರಿ ಬಿಗ್ ಬಾಸ್ ಅವಕಾಶವನ್ನು ನಿರಾಕರಿಸಿದ್ದರೂ, ಈ ಬಾರಿ ಒಪ್ಪಿಕೊಂಡು ತಮ್ಮ ವೃತ್ತಿಜೀವನಕ್ಕೆ ವೇಗ ನೀಡಲಿದೆ ಎಂಬ ನಂಬಿಕೆ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ನಟಿ ಪ್ರಥಮಾ ಪ್ರಸಾದ್ ಅವರು ತಮ್ಮ ಬಿಗ್ ಬಾಸ್ ಅನುಭವ, ಕಾರ್ಯಗಳಲ್ಲಿನ ತಮ್ಮ ಸಾಮರ್ಥ್ಯ ಹಾಗೂ ವೈಷ್ಣವಿ ಅವರ ಉಡುಗೆ ಕುರಿತು ನಡೆದ ಚರ್ಚೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಅವರ ಬಟ್ಟೆ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ, ಅದು ಅವರ ಅಭಿಪ್ರಾಯ, ಅಭಿರುಚಿ” ಎಂದಿದ್ದಾರೆ.

ಇತ್ತೀಚೆಗೆ ವೈಷ್ಣವಿ ಬಟ್ಟೆ ಬಗ್ಗೆ ಅವಿನಾಶ್ ಅವರು ಕೆಲವು ಟಿಪ್ಸ್ ನೀಡಿದ್ದರು. ಈ ವೇಳೆ ಪ್ರಥಮಾ ಕೂಡ ಅಲ್ಲಿಯೇ ಇದ್ದರು. ಈ ಘಟನೆ ಬಗ್ಗೆ ಮಾತನಾಡಿರೋ ಪ್ರಥಮಾ, ‘ಹಾಗೆ ಹೇಳಿದ್ದು ಕೆಟ್ಟ ಉದ್ದೇಶದಿಂದ ಅಲ್ಲ ಎಂಬುದು ತಮ್ಮ ಅನಿಸಿಕೆ’ ಎಂದ ಪ್ರಥಮಾ ಅಭಿಪ್ರಾಯ ಪಟ್ಟಿದ್ದಾರೆ. ಬಿಗ್ ಬಾಸ್ ಅವಕಾಶವನ್ನು ಮೂರು ಬಾರಿ ನಿರಾಕರಿಸಿದ್ದ ಪ್ರಥಮಾ, ಈ ಬಾರಿ ತಮ್ಮ ವೃತ್ತಿಜೀವನಕ್ಕೆ ಇದು ವೇಗ ನೀಡಲಿದೆ ಎಂಬ ನಂಬಿಕೆಯಿಂದ ಒಪ್ಪಿಕೊಂಡಿದ್ದರು. ಆದರೆ, ಮೊದಲ ವಾರವೇ ಅವರು ಔಟ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published on: Sep 15, 2026 02:24 PM
Loading...
Unable to load recommendations.
Follow Us
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More