ಒಬ್ಬ ಯುವ ನಾಯಕನಾಗಿ ಪ್ರವೀಣ್ ನೆಟ್ಟಾರು ಚೆನ್ನಾಗಿ ಹೆಸರು ಮಾಡಿದ್ದರು: ಮೃತರ ಸಂಬಂಧಿ
ಕೇವಲ 4 ವರ್ಷಗಳ ಹಿಂದೆ ಮದುವೆಯಾಗಿದ್ದ ಪ್ರವೀಣ್ ನನ್ನು ಅಂಗಡಿ ಮುಚ್ಚುವಾಗ ಹಿಂಭಾಗದಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ಜಯರಾಮ್ ಹೇಳಿದ್ದಾರೆ.
ದಕ್ಷಿಣ ಕನ್ನಡ: ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುನಃ ಪ್ರಕ್ಷುಬ್ದ ಸ್ಥಿತಿಯನ್ನು ಸೃಷ್ಟಿಸಿದೆ. ಟಿವಿ9 ಮಂಗಳೂರು ವರದಿಗಾರನೊಂದಿಗೆ ಮಾತಾಡಿದ ಮೃತನ ಸಂಬಂಧಿ ಜಯರಾಮ್ (Jayaram), ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ಮತ್ತು ಯುವ ನಾಯಕನಾಗಿ ಪ್ರವೀಣ್ ಉತ್ತಮ ಹೆಸರು ಗಳಿಸಿದ್ದ, ಅವನ ಏಳಿಗೆಯನ್ನು ಸಹಿಸದ ವೈರಿಗಳು (enemies) ಕೊಲೆ ಮಾಡಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಕೇವಲ 4 ವರ್ಷಗಳ ಹಿಂದೆ ಮದುವೆಯಾಗಿದ್ದ ಪ್ರವೀಣ್ ನನ್ನು ಅಂಗಡಿ ಮುಚ್ಚುವಾಗ ಹಿಂಭಾಗದಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ಜಯರಾಮ್ ಹೇಳಿದ್ದಾರೆ.