Video: ಪ್ರಯಾಗ್​ರಾಜ್​ನಲ್ಲಿ ಪ್ರವಾಹ, ಮನೆಗೆ ಹರಿದು ಬಂದ ಗಂಗೆ, ಬಾಗಿಲಲ್ಲೇ ‘ಗಂಗಾರತಿ’ ನೆರವೇರಿಸಿದ ಪೊಲೀಸ್ ಅಧಿಕಾರಿ

Updated on: Aug 03, 2025 | 2:51 PM

ಪ್ರಯಾಗ್​ರಾಜ್​ನಲ್ಲಿ ನಿರಂತರ ಮಳೆಯಾಗುತ್ತಿದ್ದು, ಗಂಗಾ ಹಾಗೂ ಯಮುನಾ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಹಲವು ಮನೆಗಳು ಜಲಾವೃತವಾಗಿವೆ. ತುಂಬಿ ಹರಿಯುತ್ತಿದ್ದ ಗಂಗಾ ನದಿಯಿಂದ ಪ್ರವಾಹದ ನೀರು ಮನೆ ಬಾಗಿಲಿಗೆ ಬಂದಾಗ ಉತ್ತರ ಪ್ರದೇಶದ ಸಬ್-ಇನ್ಸ್‌ಪೆಕ್ಟರ್ ಚಂದ್ರದೀಪ್ ನಿಶಾದ್, ಭಯ ಪಡುವ ಬದಲು ಮನೆ ಬಾಗಿಲಿಗೆ ಹರಿದು ಬಂದ ಗಂಗೆಗೆ ಆರತಿ ನೆರವೇರಿಸಿದರು. ನಗರದ ಹಲವಾರು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ಪ್ರವಾಹದ ನೀರಿನಿಂದಾಗಿ ಡಜನ್ಗಟ್ಟಲೆ ಪ್ರದೇಶಗಳು ಮುಳುಗಿವೆ.
ಇಂದು ಬೆಳಗ್ಗೆ, ನಾನು ಕೆಲಸಕ್ಕೆ ಹೊರಡುವಾಗ, ಗಂಗಾ ಮಾತೆ ನಮ್ಮ ಮನೆ ಬಾಗಿಲಿಗೆ ಬಂದಳು. ನಾವು ನಮ್ಮ ಮನೆ ಬಾಗಿಲಲ್ಲಿ ಪ್ರಾರ್ಥನೆ ಸಲ್ಲಿಸಿ ಆಶೀರ್ವಾದ ಪಡೆದೆವು. ಜೈ ಗಂಗಾ ಮೈಯಾ ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ